ಡೈಲಿ ವಾರ್ತೆ : 31 ಮೇ 2022

✍🏻 ಕುಮಾರ್ ನಾಯ್ಕ್ ಭಟ್ಕಳ

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜೂನ್ 4 ಶನಿವಾರ ಮಧ್ಯಾಹ್ನ 3: 30 ಕ್ಕೆ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ‘ರಾಜ್ಯಮಟ್ಟದ ಅರಣ್ಯ ಭೂಮಿ ಹಕ್ಕು- ಸುಫ್ರೀಂ ಕೋರ್ಟ ವಿಚಾರಣೆ’- ಚಿಂತನ ಕೂಟ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ರಾಜ್ಯ ಮಟ್ಟದ ಚಿಂತನ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸುತ್ತಾ, ಸದ್ರಿ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ ಅವರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.


ಅರಣ್ಯ ಹಕ್ಕು ಕಾಯಿದೆಯಲ್ಲಿ ತೀರಸ್ಕಾರವಾದ ಅರಣ್ಯ ಅತೀಕ್ರಮಣದಾರರನ್ನ ಒಕ್ಕಲೆಬ್ಬಿಸಿ, ಅರಣ್ಯೀಕರಣ ಮಾಡಬೇಕೆಂಬ ೮ ಪರಿಸರ ಸಂಘಟನೆ ಸುಫ್ರೀಂ ಕೋರ್ಟನಲ್ಲಿ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು ಇರುತ್ತದೆ. ಈ ಅರ್ಜಿಯಲ್ಲಿ ರಾಜ್ಯ ಸರಕಾರ ಈಗಾಗಲೇ ತೀರಸ್ಕಾರವಾದ ಅತೀಕ್ರಮಣದಾರರನ್ನ ಒಕ್ಕಲೆಬ್ಬಿಸುವುದಾಗಿ ಸುಫ್ರೀಂ ಕೋರ್ಟನಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ. ಈ ಹಿನ್ನೆಲೇಯಲ್ಲಿ ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಪರವಾಗಿ ವಾದಮಂಡಿಸಲು ಅರ್ಜಿ ಸಲ್ಲಿಸಿದ್ದು, ಅರ್ಜಿಯು ಅರಣ್ಯವಾಸಿಗಳ ಪರವಾಗಿ ಸ್ವೀಕಾರವಾಗಿದ್ದು, ಕಾನೂನು ಹೋರಾಟದಲ್ಲಿನ ದಾಖಲಾರ್ಹ ಅಂಶ ಎಂದು ಅವರು ಹೇಳಿದರು.

ವೇದಿಕೆಯ ಕಾರ್ಯಾಲಯದಲ್ಲಿ ಖಾದರ್ ಬಚಗಾಂವ, ಉದಯ ನಾಯ್ಕ, ನಾರಾಯಣ ಸುಬ್ಬ ಪೂಜಾರಿ, ಬಂಗಾರಿ ಸುಬ್ರಾಯ ಆಚಾರಿ, ಉಪಸ್ಥಿತರಿದ್ದರು.


ಜುಲೈನಲ್ಲಿ ಅಂತಿಮ ತೀರ್ಮಾನ:
ಅರಣ್ಯವಾಸಿಗಳ ಭೂಮಿ ಹ್ಕಕಿಗೆ ಸಂಬAಧಿಸಿ ಸುಫ್ರೀಂ ಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಅಂತಿಮ ವಿಚಾರಣೆ ಜುಲೈನಲ್ಲಿ ಜರಗುತ್ತಿದ್ದು, ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಅಂತಿಮ ತೀರ್ಮಾನ ಹೋರಹೊಮ್ಮಲಿರುವುದರಿಂದ ರಾಜ್ಯಮಟ್ಟದ ಕಾನೂನು ತಜ್ಞರಿಂದ ಚಿಂತನ ಕೂಟ ಜರುಗಿಸುತ್ತಿದ್ದೇವೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.