ಡೈಲಿ ವಾರ್ತೆ : 31 ಮೇ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ಜೋಗ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಜೋಗ – ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10 ನೇ ವಾರ್ಡ್ ನಲ್ಲಿರುವ ನಿವಾಸಿಗಳಿಗೆ ಸರಿಯಾದ ರಸ್ತೆ ಸಾರಿಗೆ ವ್ಯವಸ್ಥೆಯಿಲ್ಲದೇ ಅಸಹಾಯಕ ಸ್ಥಿತಿಗೆ ತಲುಪಿದ ನಿವಾಸಿಗಳ ಕಥೆ – ವ್ಯಥೆ.

ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 10 ರ ಚರ್ಚ ಮೌಂಟ್ ನಿವಾಸಿಗಳು ವಯಸ್ಸಾದವರಿಗೆ ಅನಾರೋಗ್ಯ ಪೀಡಿತರ ವೇದನೆ ಹೇಳತೀರದು.

ಜಟಿಲವಾದ ಸಂಪರ್ಕ ರಸ್ತೆಯನ್ನೂ ಸರಿಪಡಿಸಿ ಕೊಡುವಂತೆ ಸ್ಥಳೀಯ ನಿವಾಸಿಗಳು ಸ್ಥಳೀಯ ಆಡಳಿತವಾದ ಜೋಗ – ಕಾರ್ಗಲ್ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.


ಅದಂ ಎಂಬುವವರು ತಮ್ಮ ವಯಸ್ಸಾದ ತಾಯಿಯು ಪಾರ್ಶ್ವಾಯು ಕಾಯಿಲೆಯಿಂದ ನರಳುತ್ತಿದ್ದೂ ತನ್ನ ತಾಯಿಯನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲದೇ ಕಚ್ಚಾ ರಸ್ತೆಯಲ್ಲೇ ಬಹು ದೂರದ ವರೆಗೆ ಜೋಲಿಯಲ್ಲೇ ಹೊತ್ತುಕೊಂಡು ಹೋಗುತ್ತಿರುವ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೂ, ನೆಟ್ಟಿಗರು ಭವ್ಯ ಭಾರತ ಸುವರ್ಣ ಸಂಭ್ರಮ ಆಚರಿಸುತ್ತಿರುವ ಬೆನ್ನೆಲ್ಲೇ ಇಂತಹ ಅವ್ಯವಸ್ಥೆ ಬಗ್ಗೆ ಸಂಸದರು, ಶಾಸಕರು ಹಾಗೂ ಶಿವಮೊಗ್ಗ ಜಿಲ್ಲಾಡಳಿತ ವಿರುದ್ಧ ಕಿಡಿಕಾರುತ್ತಿದ್ದಾರೆ.

ಅಭಿವೃದ್ಧಿ ಪರ ಚಿಂತನೆಯುಳ್ಳ ಜನಸ್ನೇಹಿ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಶ್ರೀ ಡಾ. ಸೆಲ್ವಮಣಿ ರವರು ಜೋಗ – ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 10 ರಲ್ಲಿ ವಾಸಿಸುತ್ತಿರುವ ನಿವಾಸಿಗಳ ಮೂಲಭೂತ ಸೌಕರ್ಯವಾದ ರಸ್ತೆ ಸಂಪರ್ಕ ಕಲ್ಪಿಸಿ ಅನಾರೋಗ್ಯ ಪೀಡಿತರನ್ನು ಜೋಳಿಗೆ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತಹ ದುಸ್ಥಿತಿಗೆ ವಿರಾಮ ಹಾಕುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ