ಡೈಲಿ ವಾರ್ತೆ : 31 ಮೇ 2022

✍🏻 ಕುಮಾರ್ ನಾಯ್ಕ್ ಭಟ್ಕಳ

ಹೊನ್ನಾವರ:ತಾಲೂಕಿನ ಗೇರುಸೊಪ್ಪಾ ಪೊಲೀಸ್ ಚೆಕ್ ಪೋಸ್ಟನಲ್ಲಿ ವಾಹನ ತಪಾಸಣೆ ವೇಳೆ ಅಧಿಕೃತವಾಗಿ ಯಾವುದೇ ಪಾಸ್ ಪರ್ಮಿಟ್ ಹೊಂದದೇ, ಅಕ್ರಮವಾಗಿ ಲಾರಿಯಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು,ಪೊಲೀಸರು ಜಾನುವಾರು ಸಮೇತ ಆರೋಪಿಗಳ ಹೆಡೆಮುರಿ ಕಟ್ಟಿದ ಘಟನೆ ನಡೆದಿದೆ.

ಆರೋಪಿತರು ಗುಜರಾತ ರಾಜ್ಯದ ತಹಶಿಲ ಪಟಾನ ಜಿಲ್ಲೆಯ ಲಕ್ಷ್ಮೀಪುರದ ಅಸ್ಥಾಕಬಾಯ್ , ಜೂನೈದಬಾಯ್ ಎಂದು ಗುರುತಿಸಲಾಗಿದೆ.ಖದಿಮರು ಮಂಗಳವಾರ ಸಾಯಂಕಾಲ 05-30ರ ವೇಳೆಗೆ ಲಾರಿಯಲ್ಲಿ ಐದು ಕೋಣಗಳು,ಮೂರು ಗೂಳಿ ಒಟ್ಟೂ 8 ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು. ಮಹಾರಾಷ್ಟ್ರ ರಾಜ್ಯದಿಂದ ಭಟ್ಕಳ ತಾಲೂಕಿಗೆ ಜಾನುವಾರುಗಳನ್ನು ವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು. ಆರೋಪಿತರ ವಿರುದ್ಧ ಹೊನ್ನಾವರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.