ಡೈಲಿ ವಾರ್ತೆ : 30 ಜೂನ್ 2022

✍🏻 ಕುಮಾರ್ ನಾಯ್ಕ್ ಭಟ್ಕಳ

ಭಟ್ಕಳ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿತ್ತು. ಗುರುವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಭಟ್ಕಳಕ್ಕೆ ಆಗಮಿಸಿ ತಾಲೂಕ ಆಡಳಿತ ಮತ್ತು ಪುರಸಭೆ ಅಧ್ಯಕ್ಷರನ್ನೊಳಗೊಂಡ ಸಮಿತಿಯೊಂದಿಗೆ ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ್ರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಸರಕಾರಿ ಕಚೇರಿಯಲ್ಲಿ ಉರ್ದು ಬಾಷೇ ನಾಮಫಲಕ ಅಳವಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ, ಮತ್ತು ಸರಕಾರದ ಅನುಮತಿ ಇಲ್ಲ. ಕನ್ನಡ ಮತ್ತು ಆಂಗ್ಲ ಭಾಷೆ ಮಾತ್ರ ಬಳಸಲು ಅನುಮತಿ ಇದೆ . ಆದ ಕಾರಣ ಈ ಕೂಡಲೇ ಭಟ್ಕಳ ಪುರಸಭೆಯಲ್ಲಿ ಅಳವಡಿಸಿರುವ ಉರ್ದು ನಾಮಫಲಕ ತೆರವುಗೊಳಿಸಲು ಆದೇಶ ಮಾಡಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಆದೇಶ ಆದ ಕೂಡಲೇ ಭಟ್ಕಳ ಪುರಸಭೆಯಲ್ಲಿ ಅಳವಡಿಸಿರುವ ಉರ್ದು ನಾಮಫಲಕ ತೆರವು ಮಾಡಲಾಗಿದೆ.

ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಉರ್ದು ನಾಮಫಲಕ ತೆರವುಗೊಳಿಸುವಂತೆ ಸೋಮವಾರ ಮತ್ತು ಮಂಗಳವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ , ಮಂಗಳವಾರ ಸಹಾಯಕ ಆಯುಕ್ತರಿಗೆ ಮನವಿ ಕೂಡ ನೀಡಿದರು. ಇದು ಸಮಸ್ತ ಕನ್ನಡಿಗರಿಗೆ ಸಂದ ಜಯವಾಗಿದೆ.