ಡೈಲಿ ವಾರ್ತೆ : 31 ಆಗಸ್ಟ್ 2022

ನಟಿ ರಮ್ಯಾ ಸಿಹಿ ಸುದ್ದಿ: ಮತ್ತೆ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ವಾಪಸು ಬಂದ ನಟಿ ರಮ್ಯಾ ..!

ಬೆಂಗಳೂರು: ಖ್ಯಾತ ನಟಿ ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ನಾಳೆ 11.15ಕ್ಕೆ ಸಿಹಿ ಸುದ್ದಿ ನೀಡುವುದಾಗಿ ನಿನ್ನೆ ತಿಳಿಸಿದ್ದರು. ಅದರಂತೆ, ಅವರು ಈಗ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

ತಮ್ಮ ಹೊಸ ನಿರ್ಮಾಣ ಸಂಸ್ಥೆಗೆ ‘ಆಪಲ್ ಬಾಕ್ಸ್’ ಎಂದು ಹೆಸರು ಇಟ್ಟಿದ್ದಾರೆ.

“ನಾನು ಅಧಿಕೃತವಾಗಿ ನಾಳೆ 11.15ಕ್ಕೆ ಸಿಹಿಸುದ್ದಿ ಕೊಡ್ತೀನಿ” ಎಂದು ನಟಿ ರಮ್ಯಾ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದೇ ತಡ, ಏನಿರಬಹುದು ಎಂದು ಅವರ ಅಭಿಮಾನಿಗಳ ಚರ್ಚೆಯಲ್ಲಿ ತೊಡಗಿದ್ದರು. ಈಗ ಈ ಕಾತುರಕ್ಕೆ ತೆರೆಬಿದ್ದಿದೆ. ಹೌದು, ಈ ಕುರಿತು ಮತ್ತೆ ಟ್ವೀಟ್ ಮಾಡಿರುವ ರಮ್ಯಾ, ನಾನು ನನ್ನ ಸಿನಿಮಾ ನಿರ್ಮಾಣ ಸಂಸ್ಥೆಯೊಂದಿಗೆ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.