ಡೈಲಿ ವಾರ್ತೆ : 31 ಆಗಸ್ಟ್ 2022

✍🏻ವರದಿ : ಕುಮಾರ್ ನಾಯ್ಕ್ ಭಟ್ಕಳ

ಭಟ್ಕಳದ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಿಂದ ಹೊನ್ನೆಗದ್ದೆಯಲ್ಲಿ 26 ಅಡಿ ಆಳದ ಬಾವಿಯಲ್ಲಿ ಬಿದ್ದ ಕೋಣ ರಕ್ಷಣೆ.

ಭಟ್ಕಳ-ದಿನಾಂಕ 30-08-2022 ರಂದು ಮಂಗಳವಾರ ಸಮಯ 8:05 ಕ್ಕೆ ಶ್ರೀ ರವಿ ಕೃಷ್ಣ ಗೊಂಡ ರವರು ಹೊನ್ನೆಗದ್ದೆ , ವರಕೊಡ್ಲುನಲ್ಲಿ 06 ಅಡಿ ಅಗಲ 26 ಅಡಿ ಆಳದ ನೀರು ತುಂಬಿದ ಬಾವಿಯಲ್ಲಿ ಒಂದು ಟನ್ ತೂಕದ ಕೋಣವು ಬಿದ್ದಿದೆ ಎಂದು ಭಟ್ಕಳ್ ಅಗ್ನಿಶಾಮಕ ಠಾಣೆಯವರಿಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣ ಜಲವಾಹನದೊಂದಿಗೆ ಅಧಿಕಾರಿ ರಮೇಶ್ ಶೆಟ್ಟಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಜಲವಾಹನದ ಹಗ್ಗ ಹಾಗೂ ಹೋಸ್ ಗಳ ಸಹಾಯದಿಂದ ಕೋಣವನ್ನು ನೀರಿನಿಂದ ಮೇಲಕ್ಕೆ ತೆಗೆದು ರಕ್ಷಿಸಿದರು.

ಈ ರಕ್ಷಣಾ ಕರೆಯ ಕಾರ್ಯದಲ್ಲಿ ಭಟ್ಕಳ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಶ್ರೀ ಎಸ್ ರಮೇಶ, ಶ್ರೀ ಮನೋಜ ಜಿ ಬಾಡಕರ, ಶ್ರೀ ಶಿವಪ್ರಸಾದ ನಾಯ್ಕ , ಶ್ರೀ ಕುಮಾರ ನಾಯ್ಕ , ಶ್ರೀ ಶಂಕರ ಲಮಾಣಿ , ಶ್ರೀ ಪುರುಷೊತ್ತಮ ನಾಯ್ಕ, ಶ್ರೀ ರಾಜೇಶ ನಾಯ್ಕ, ಶ್ರೀ ಅರುಣ ನಾಯ್ಕ ಬಾಗವಹಿಸಿದರು. ಭಟ್ಕಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳ ಈ ಕಾರ್ಯವನ್ನು ಭಟ್ಕಳ ಹೊನ್ನೆಗದ್ದೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.