ಡೈಲಿ ವಾರ್ತೆ : 30 ಸೆಪ್ಟೆಂಬರ್ 2022

RSS ಪಥ ಸಂಚಲನಕ್ಕೆ ಅನುಮತಿ ನೀಡಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಚೆನ್ನೈ: ಅಕ್ಟೋಬರ್ 2 ರ ಬದಲು ನವೆಂಬರ್ 6 ರಂದು ರೂಟ್ ಮಾರ್ಚ್ ಅನ್ನು ರಾಜ್ಯದಲ್ಲಿ ನಡೆಸಲು ಆರೆಸ್ಸೆಸ್‌ಗೆ ಅನುಮತಿಸಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ.

ಮದ್ರಾಸ್ ಹೈಕೋರ್ಟ್‌ ತನ್ನ ಸೆಪ್ಟೆಂಬರ್ 22 ರ ಆದೇಶದಲ್ಲಿ ರೂಟ್ ಮಾರ್ಚ್ ಕುರಿತಂತೆ ಸಕಾರಾತ್ಮಕ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ಅನುಮತಿ ನೀಡದೇ ಇರುವ ಕುರಿತಂತೆ ಆರೆಸ್ಸೆಸ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಆದರೆ ಈ ಪ್ರಕರಣದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದ ನ್ಯಾಯಾಲಯ, ರೂಟ್ ಮಾಚ್‌ರ್ಗೆ ಅನುಮತಿಸುವಂತೆ ಸೂಚಿಸಿದೆ.

`ನ್ಯಾಯಾಲಯವು ರೂಟ್ ಮಾರ್ಚ್ ಕುರಿತಂತೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವಾಗ ಅನುಮತಿ ನಿರಾಕರಿಸಲು ಹೊಸ ಕಾರಣಗಳನ್ನು ಪೊಲೀಸರು ಹುಡುಕುವಂತಿಲ್ಲ ಎಂದು ಆರೆಸ್ಸೆಸ್ ಪರ ಹಾಜರಿದ್ದ ಹಿರಿಯ ವಕೀಲ ಪ್ರಭಾಕರ್ ಹೇಳಿದರು. ಇತ್ತೀಚೆಗೆ ಪಿಎಫ್‌ಐ ನಿಷೇಧ ಹಿನ್ನೆಲೆಯಲ್ಲಿ ರೂಟ್ ಮಾಚ್‌ರ್ಗೆ ಸರ್ಕಾರ ಅನುಮತಿ ನಿರಾಕರಿಸಿತ್ತು ಎಂದೂ ಅವರು ಹೇಳಿದರು.

“ಒಂದು ಸಂಘಟನೆ ನಿಷೇಧಕ್ಕೊಳಗಾಗಿದೆ ಎಂಬ ಮಾತ್ರಕ್ಕೆ ನಾನೂ ಕಷ್ಟ ಅನುಭವಿಸಬೇಕೆಂದೇನೂ ಇಲ್ಲ. ಆರೆಸ್ಸೆಸ್ ನಿಷೇಧಿತ ಸಂಘಟನೆಯಲ್ಲ’ ಎಂದು ಅವರು ಹೇಳಿದರು. ಅಕ್ಟೋಬರ್ 2 ರಂದು ಆರೆಸ್ಸೆಸ್ ರೂಟ್ ಮಾರ್ಚ್ ಗೆ ಅನುಮತಿಸದೇ ಇರುವ ಕುರಿಂತೆ ಗುಪ್ತಚರ ವರದಿಗಳಿವೆ ಎಂದು ಪೊಲೀಸರ ಪರ ಹಾಜರಿದ್ದ ವಕೀಲ ಎನ್ ಆರ್ ಇಲಾಂಗೋ ಹೇಳಿದರು.

ಇತ್ತಂಡಗಳ ವಾದ ಆಲಿಸಿದ ನ್ಯಾಯಾಲಯ, ರಾಜ್ಯ ಸರಕಾರವು ಅಕ್ಟೋಬರ್ 2 ರಂದು ರೂಟ್ ಮಾಚ್‌ರ್ಗೆ ವಿರೋಧ ವ್ಯಕ್ತಪಡಿಸಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ನವೆಂಬರ್ 6 ರಂದು ಮಾರ್ಚ್ ನಡೆಸಬಹುದೆಂದು ತಿಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ನಿಗದಿಪಡಿಸಿದೆ.