ಡೈಲಿ ವಾರ್ತೆ : 30 ಸೆಪ್ಟೆಂಬರ್ 2022

ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೋಡಿ ಕನ್ಯಾನ ಹಾಗೂ ಕೋಡಿ ಗ್ರಾಮ ಪಂಚಾಯತ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ಕೋಟ :ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕೋಡಿ ಕನ್ಯಾನ ಹಾಗೂ ಕೋಡಿ ಗ್ರಾಮ ಪಂಚಾಯತ್‌ ಇವರ ಜಂಟಿ ಸಹಯೋಗದೊಂದಿಗೆ ಸೆ.30 ರಂದು ಶುಕ್ರವಾರ ಬೆಳಿಗ್ಗೆ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ, ಉಚಿತ ನೇತ್ರ ತಪಾಸಣ ಶಿಬಿರ ಏರ್ಪಡಿಸಲಾಯಿತು.

ಈ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪ್ರಭಾಕರ ಮೆಂಡನ್‌ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಗೀತಾ ಖಾರ್ವಿ, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯವರಾದ ರವೀಂದ್ರ ರಾವ್, ಕಾರ್ಯದರ್ಶಿ ಉಷಾ ಶೆಟ್ಟಿ, ನೇತ್ರಾಧಿಕಾರಿ ಸುಮಿತ್ರ, ಕೋಟ PHC, ಕಿರಿಯ ಆರೋಗ್ಯ ಸಹಾಯಕಿ ಅಮಿತಾ, ಆಶಾ ಕಾರ್ಯಕರ್ತ ವಿನೋದ, ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.