ಡೈಲಿ ವಾರ್ತೆ: 31 ಅಕ್ಟೋಬರ್ 2022

ವರದಿ : ವಿದ್ಯಾಧರ ಮೊರಬಾ ಅಂಕೋಲಾ

ಅಂಕೋಲಾ: ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಹಸೀಲ್ದಾರ್ ಕಚೇರಿಗೆ ಬೇಟಿ: ತಾಲೂಕ ಮಟ್ಟದ ಇಲಾಖಾ ಅಧಿಕಾರಿಗಳೊಂದಿಗೆ ಸಭೆ



ಅಂಕೋಲಾ : ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಹಸೀಲ್ದಾರ್ ಕಚೇರಿಗೆ ಸೋಮವಾರ ಬೇಟಿ ಮಾಡಿ ಎಲ್ಲ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ಕರೆದು ಆಯಾ ಇಲಾಖೆಗಳ ಸಮಸ್ಯೆಗಳ ಕುರಿತು ಚರ್ಚಿಸಿದರು.



ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಮೇಸ್ತಾ ಮಾತನಾಡಿ, ಈಸ್ವತ್ತು ಸಮಸ್ಯೆಯಿದ್ದು, ಇದನ್ನು ನಿವಾರಣೆ ಮಾಡಲು ಕ್ರಮ
ಕೈಗೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರಿಯಾಗಿದ್ದು, ಕ್ರಿಯಾ ಯೋಜನೆ ಕೂಡ ಮಾಡಲಾಗಿದೆ. ಆದರೆ ಇಂಜಿನೀಯರ್ ಹುದ್ದೆ ಖಾಲಿಯಿದ್ದರಿಂದ ಕಾಮಗಾರಿ ಮಾಡ ಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂಜಿನೀಯರ್
ನೇಮಕವಾಗಬೇಕು ಈ ಹಿಂದೆ 40 ಲಕ್ಷ ರೂ. ಅವ್ಯವ ಹಾರವಾಗಿದ್ದು, ಕಂದಾಯ ಹಿರಿಯ ಅಧಿಕಾರಿಗಳಾದ ಆರ್.ವಿ.ಕಟ್ಟಿಮನೆ ನೇತ್ರದಲ್ಲಿ ಸಂಬಂಧಿಸಿದ ಅಧಿ ಕಾರಿಗಳು ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ಹೀಗಾಗಿ
ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ಆಗ ಬೇಕೆಂದು ಪುರಸಭೆ
ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು ಆಗ್ರಹಿಸಿದ್ದಾರೆ ಎಂದರು.



ಪಿಐ ಸಂತೋಷ ಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಗಂಗಾವಳಿ ನದಿಗೆ ಹೊನ್ನಳ್ಳಿಯಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣ, ಅಲಗೇರಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಯ ಗೊಂದಲಗಳಿವೆ ಎಂದರು. ಬಿಇಓ ಮಂಗಳಲಕ್ಷೀ ಲಾಟೀಲ
ಮಾತನಾಡಿ, 40 ಶಾಲಾ ಕಟ್ಟಡಗಳು ಅರಣ್ಯ ಇಲಾಖೆ ಸ್ಥಳದಲ್ಲಿದ್ದು, ಅದರಲ್ಲಿ 20 ಪಹಣಿ ಪತ್ರಿಕೆಯಾಗಿದ್ದು, ಇನ್ನು 20 ಆಗಬೇಕಿದೆ ಎಂದರು. ಹೀಗೆ ವಿವಿಧ ಇಲಾಖೆಗಳ ಕುಂದು-ಕೊರತೆಗಳ ಕುರಿತು ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಕುಮಟಾ ಎಸಿ ರಾಘವೇಂದ್ರ ಜಗಳಾಸರ, ತಹಸೀಲ್ದಾರ್ ಉದಯ ಕುಂಬಾರ, ಉಪ ತಹಸೀಲ್ದಾರ್ ಸುರೇಶ ಹರಿಕಂತ್ರ, ವಿವಿಧ ಇಲಾಖೆಯ ಅಧಿಕಾರಿಗಳಾದ ಪಿ.ವೈ.ಸಾವಂತ, ಪ್ರವೀಣ ನಾಯ್ಕ, ಶ್ರೀಧರ ನಾಯ್ಕ, ವಿ.ಟಿ.ನಾಯಕ, ರೇನಿಟಾ ಡಿಸೋಜಾ, ರಾಹುಲ ನಾಯಕ,
ಕೃಷ್ಣೇಗೌಡ, ಶಶಿಕಾಂತ ಕೋವಳೆಕರ್,ಸವಿತಾ ಶಾಸ್ತ್ರಿಮಠ, ಶಾಂತಲಾ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.