ಡೈಲಿ ವಾರ್ತೆ: 31 ಅಕ್ಟೋಬರ್ 2022

ವರದಿ : ವಿದ್ಯಾಧರ ಮೊರಬಾ ಅಂಕೋಲಾ

ಲಾರಿ ಅಸೋಸಿಯೇಶನ್ ಘಟಕದವರಿಂದ ಟ್ಯಾಂಕರ್, ಲಾರಿ ಮಾಲೀಕರ ಕುಂದು ಕೊರತೆಯ ಕುರಿತು ಮಾನ್ಯ ಜಿಲ್ಲಾಧಿಕಾರಿಗೆ ಮನವಿ



ಅಂಕೋಲಾ : ಟ್ಯಾಂಕರ್ ಲಾರಿ ಅಸೋಸಿಯೇಶನ್ ಉತ್ತರ ಕನ್ನಡ ಘಟಕದವರು ಟ್ಯಾಂಕರ್ ಲಾರಿ ಮಾಲೀಕರ ಕುಂದು ಕೊರತೆಯ ಕುರಿತು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.


ಉ.ಕ.ಟ್ಯಾಂಕರ್ ಮಾಲಿಕರ ಸಂಘದ ಅಧ್ಯಕ್ಷ ಗಣಪತಿ ಮೂಲೆಮನೆ ಮಾತನಾಡಿ, ಕಾರವಾರ ಬೈತ್ಕೂಲ್ ಬಂದರು ಪ್ರದೇಶವಾಗಿರುವುದರಿಂದ ಆಯಿಲ್ ಹಾಗೂ ಡಾಂಬರ್‍ಗಳು ರಪ್ತು ಹಾಗೂ ಆಮುದು ನಡೆಯುತ್ತಿದೆ.
ಉದ್ಯೋಗ ಸಿಗಬಹುದೆಂದು ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಟ್ಯಾಂಕರ್ ಲಾರಿ ಖರೀದಿ ಮಾಡಿ ದ್ದೇವೆ. ಇದಕ್ಕೆ ಸರಿಯಾದ ಬಾಡಿಗೆ ಲಭ್ಯವಾಗಿಲ್ಲ. ಉ.ಕ.ಜಿಲ್ಲೆಯಲ್ಲಿ ಅಂದಾಜು 150ಕ್ಕಿಂತ ಹೆಚ್ಚು ಟ್ಯಾಂಕ ರ್ ವಾಹನಗಳಿದ್ದು, ನಮಗೆ ಸರಿಯಾದ
ರೀತಿಯಲ್ಲಿ ಬಾಡಿಗೆ ರೂಪದಲ್ಲಿ ತೈಲ ಉತ್ಪನ್ನ ಸಾಗಾಟಕ್ಕೆ ಸ್ಥಳೀಯ ವಾಹನಗಳನ್ನು ತೆಗೆದುಕೊಳ್ಳಬೇಕು. ಮಲಸಿಸ್ ರನ್ನಿಂಗ ಕಿಲೋಮೀಟರ್ ಒಂದಕ್ಕೆ ಪರ ಟನ್‍ಗೆ 2 ರೂ.50ಪೈಸೆ ಹಾಗೂ ಡಾಂಬರ್ ರನ್ನಿಂಗ್ ಕಿಲೋಮೀಟರ್ ಒಂದಕ್ಕೆ ಪರ್ ಟನ್‍ಗೆ 3 ರೂ. 25 ಪೈಸೆ ನಿಗದಿ ಪಡಿಸಿ, ಹೊರ
ರಾಜ್ಯದ ವಾಹನಗಳಿಗೆ ಅವಕಾಶ ಮಾಡಿಕೊಡದಂತೆ, ಸ್ಥಳೀಯ
ವಾಹನಗಳಿಗೆ ಮೊದಲ ಆದ್ಯತೆ ನೀಡಬೇಕು. ಇದರಿಂದಾಗಿ ಸುಮಾರು 500 ಕುಟುಂಬಗಳಿಗೆ ಜೀವನ ನಿರ್ವಹಣೆ ಆಗಲಿದೆ ಎಂದರು.


ಈ ಸಂದರ್ಭದಲ್ಲಿ ಎಸಿ ರಾಘವೇಂದ್ರ ಜಗಳಾಸರ, ತಹಸೀಲ್ದಾರ ಉದಯ ಕುಂಬಾರ, ಲಾರಿ ಮಾಲೀಕರ ಸಂಘದ ವಿವಿಧ ಪದಾಧಿಕಾರಿಗಳಾದ ಕಿರಣ ನಾಯ್ಕ, ಬ್ರಿಜೇಶ ನಾಯಕ, ಪ್ರಮೋದ ನಾಯ್ಕ, ರುಪೇಶ ನಾಯ್ಕ, ಗಣಪತಿ ನಾಯ್ಕ ಇತರರಿದ್ದರು.