ಡೈಲಿ ವಾರ್ತೆ: 30 ನವಂಬರ್ 2022

ನ್ಯೂಜಿಲ್ಯಾಂಡ್ ನ ಅಕ್ಲ್ಯಾಂಡ್ ನಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ನಲ್ಲಿ 1ಚಿನ್ನ ಮತ್ತು 1 ಬೆಳ್ಳಿ ಪದಕ ಮುಡಿಗೆರಿಸಿಕೊಂಡ ಕುಂದಾಪುರದ ಕುವರ ಸತೀಶ್ ಖಾರ್ವಿ

ಕುಂದಾಪುರ: ನ್ಯೂಜಿಲ್ಯಾಂಡ್ ನ ಅಕ್ಲ್ಯಾಂಡ್ ನಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಕುಂದಾಪುರದ ಕುವರ ನ್ಯೂ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕ ಸತೀಶ್ ಖಾರ್ವಿ ಬೆಂಚ್ ಪ್ರೆಸ್ M-1 66 ಕೆಜಿ 2 ವಿಭಾಗದಲ್ಲಿ ಕ್ಲಾಸಿಕ್ ಮತ್ತು ಇಪ್ಪೆಡ್ ಸ್ಪರ್ಧೆಯಲ್ಲಿ 1 ಚಿನ್ನದ ಪದಕ ಹಾಗೂ 1ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.

ಅಲ್ಲದೆ ಡಿಸೆಂಬರ್ 1 ರಂದು ನಡೆಯುವ ಯಕುಪ್ಪೆಡ್ ಪವರ್ ಲಿಫ್ಟಿಂಗ್ ಸ್ಪರ್ಧೆ ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.