ಡೈಲಿ ವಾರ್ತೆ: 30 ನವಂಬರ್ 2022

“ಕಳಚಿತು ಯಕ್ಷಲೋಕದ ಧೀಮಂತ ಕೊಂಡಿ, ಮಾತಿನ ಮಲ್ಲ ,ಯಕ್ಷಲೋಕದ ದಿಗ್ಗಜ, ಮೇರು ಕಲಾವಿದ “ಕುಂಬಳೆ ಸುಂದರ್ ರಾವ್” ವಿಧಿವಶ……!

  • ಯಕ್ಷರಾತ್ರಿಯ ಪಯಣ ಮುಗಿಸಿದ ಮಾತಿನ ಮಲ್ಲ ,ಯಕ್ಷ ಚತುರ , ಕುಂಬ್ಳೆ ಸುಂದರ್ ರಾವ್ ಇನ್ನು ನೆನಪು ಮಾತ್ರ…!” ದೈವದತ್ತ ಕಲೆಯಲ್ಲಿ ಲೀನವಾದ ಕುಂಬ್ಳೆ ಸುಂದರ್ ರಾವ್….!”

ವರದಿ : ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ, ಉಡುಪಿ. ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
m:9632581508

” ಯಕ್ಷಗಾನದ ಮೇರು ಪರ್ವತ, ಕರಾವಳಿ ಕಂಡ ಧೀಮಂತ ಕಲಾವಿದ,ಯಕ್ಷಕಲೆಯನ್ನು ಜಗದಗಲ ಪ್ರಸಿದ್ಧಿ ಪಡೆದ ಮೇಧಾವಿ ….! ಯಕ್ಷ ಲೋಕದ ಧೀಮಂತ ಕಲೆಯನ್ನು ಜಗದಗಲ ಪಸರಿಸಿ, ಕರಾವಳಿಯ ಯಕ್ಷಗಾನ ಕಲೆಗೊಂದು ಹೊಸ ಬಾಷೆ ಬರೆದ ವ್ಯಕ್ತಿತ್ವಗಳಲ್ಲಿ ಕುಂಬಳೆ ಸುಂದರ್ ರಾವ್ ಅವರು ಅಪರೂಪದ ವ್ಯಕ್ತಿ…, ಆದರೆ ಅವರು ಇಂದು ನಮ್ಮೊಂದಿಗಿಲ್ಲ ಕಲೆಯ ಸಾಮ್ರಾಜ್ಯದ ಬದುಕನ್ನು ಮಾತ್ರ ಈ ಸಮಾಜಕ್ಕೆ ನೀಡಿ ಅಸ್ತಂಗತರಾಗಿದ್ದಾರೆ.ಮುಂದಿನ ಯುವ ಪೀಳಿಗೆ ಅವರ ಕಲೆಯನ್ನ ಜಗದಗಲ ಪಸರಿಸುವ ಕಲಾವಿದರು ಇಂದಿನ ಸಮಾಜಕ್ಕೆ ಕುಂಬ್ಳೆ ಸುಂದರ ರಾವ್ ರಂತಹ ಮೇರು ಯಕ್ಷಗಾನ ನಟ, ಕಲಾವಿದ ರಂಗಚಾತುರ್ಯ, ಅಪ್ಪಟ ಮಾತುಗಾರ ಈ ಸಮಾಜದಲ್ಲಿ ಇಲ್ಲ ಎನ್ನುವುದೇ ನೋವಿನ ಸಂಗತಿ. ಎನ್ನುವುದೇ ಇವತ್ತಿನ ದಿನಮಾನದಲ್ಲಿ ನೆನಪಾಗುವ ಧೀಮಂತಕಲೆಯ ವ್ಯಕ್ತಿತ್ವದ ಸಾಧಕ….!”

ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ್ದ ಇವರು, ಯಕ್ಷಗಾನದ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದ ಇವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದರು.ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ .ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆ ಇವರ ಪಾಲಿಗೆ ಸಂದಿತ್ತು.ಸುಂದರ್ ರಾವ್ ಅವರು ಪತ್ನಿ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ ಅಂತ್ಯ ಸಂಸ್ಕಾರ ನೆರವೇರಲಿದ್ದು, ಸಾರ್ವಜನಿಕರಿಗೆ ವೀಕ್ಷಣೆಗೆ ಮಂಗಳೂರು ಪಂಪ್ವೆಲ್ ಬಳಿ ಇರುವ ಅವರ ಮನೆಯಲ್ಲಿ ಅವಕಾಶವಿದೆ. ಯಕ್ಷಗಾನ ಕಲಾರಂಗದ ಇಡೀ ತಂಡ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.ಕುಂಬ್ಳೆ ಸುಂದರ ರಾವ್ ಅಥವಾ ಕುಂಬ್ಳೆ ಸುಂದರ್ ರಾವ್ (ಮರಣ 30 ನವೆಂಬರ್ 2022) ಒಬ್ಬ ಭಾರತೀಯ ರಾಜಕಾರಣಿ ಮತ್ತು ಯಕ್ಷಗಾನ ಮತ್ತು ಮಂಡಳಿ (ಸಾಂಪ್ರದಾಯಿಕ ನೃತ್ಯ) ಕಲಾವಿದರಾಗಿದ್ದರು. ಅವರು ಯಕ್ಷಗಾನದ ತೆಂಕುತಿಟ್ಟು ಅಥವಾ ತೆಂಕತಿಟ್ಟು ಶೈಲಿಯ ಪ್ರತಿಪಾದಕರಾಗಿದ್ದರು. ಅವರು ಕಡಲತಡಿಯ ಮಂಗಳೂರು ಸಮೀಪದ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿದ್ದರು . ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. ಅವರು ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ (ಯಕ್ಷಗಾನ ತಂಡಗಳು) ಕಲಾವಿದರಾಗಿ ಕೆಲಸ ಮಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಸುಂದರ್ ರಾವ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರು ಇಬ್ಬರು ಪುತ್ರರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಯಕ್ಷಗಾನಕ್ಕಾಗಿ ಕೇರಳದ ಕುಂಬಳೆಯಿಂದ ಕರ್ನಾಟಕ್ಕೆ ಬಂದವರು. ತಮ್ಮ ಮಾತಿನ ಮೋಡಿಯಿಂದ ಎಂಥವರನ್ನೂ ತಲೆದೂಗಉವಂತೆ ಮಾಡುತ್ತಿದ್ದರು. ಬಿಜೆಪಿಯ ಹಿರಿಯ ನಾಯಕ ಲಾಲಕೃಷ್ಣ ಅಡ್ವಾಣಿ ಅವರು ರಥಯಾತ್ರೆ ನಡೆಸಿದಾಗ ಕುಂಬಳೆ ಅವರು ಬಿಜೆಪಿ ಪರ ಮಾಡುತ್ತಿದ್ದ ಭಾಷಣಗಳು ಜನಪ್ರಿಯವಾಗಿದ್ದವು. ಇದನ್ನು ಗಮನಿಸಿದ್ದ ಬಿಜೆಪಿ 1994ರ ವಿಧಾನಸಭೆ ಚುನಾವಣೆಗೆ ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸಲು ಕುಂಬಳೆ ಅವರಿಗೆ ಟಿಕೆಟ್ ನೀಡಿತ್ತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನ ವಿಜಯಕುಮಾರ್ ಶೆಟ್ಟಿ ವಿರುದ್ಧ 4 ಸಾವಿರ ಮತಗಳ ಅಂತರದಿಂದ ಕುಂಬಳೆ ಗೆದ್ದಿದ್ದರು. ಆದರೆ 1999ರ ಚುನಾವಣೆಯಲ್ಲಿ ಅದೇ ಶೆಟ್ಟಿ ವಿರುದ್ಧ ಕುಂಬಳೆ ಪರಾಭವಗೊಂಡರು. ನಂತರ ಅವರಿಗೆ ಶಾಸಕರಾಗುವ ಅವಕಾಶ ಸಿಗಲಿಲ್ಲ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ರಂಗಮಂದಿರವನ್ನು ಯಕ್ಷಗಾನ ಪ್ರದರ್ಶನಕ್ಕೆ ಒದಗಿಸಬೇಕು ಎಂದು ಹೋರಾಡಿದವರಲ್ಲಿ ಕುಂಬಳೆ ಸುಂದರ್ ರಾವ್ ಪ್ರಮುಖರು. ಅವರ ಬದುಕಿನ ಕಥೆ ‘ಸುಂದರ ಕಾಂಡ’ ಹೆಸರಿನಲ್ಲಿ ಪ್ರಕಟವಾಗಿದೆ. ಯಕ್ಷಗಾನ ಅವ ಜೀವವಾಗಿತ್ತು. ‘ಯಕ್ಷಗಾನವನ್ನು ಆರ್ಥಿಕ ದೃಷ್ಟಿಯಿಂದ ನೋಡದೆ ಮಾನಸಿಕ ಸಮತೊಲನ ದೃಷ್ಟಿಯಿಂದ ಎಲ್ಲರೂ ನಮ್ಮದು ಎಂದುಕೊಳ್ಳಬೇಕು. ಯಕ್ಷಗಾನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮಗೆಲ್ಲರಿಗೂ ಇದೆ. ಯಕ್ಷಗಾನ ಅವರದ್ದಲ್ಲ, ನನ್ನದಲ್ಲ ಎಂಬ ಭಾವನೆ ಸಲ್ಲದು. ಯಕ್ಷಗಾನವು ನಮ್ಮೆಲ್ಲರಿಗೂ ಸೇರಿದ್ದು ಎಂಬ ಭಾವನೆಯಿಂದ ಮುಂದುವರಿಯಬೇಕು’ ಎಂದು ಅವರು ಆಗಾಗ ಹೇಳುತ್ತಿದ್ದರು.

ಯಕ್ಷ ಬದುಕಿನ ಕಲೆಯನ್ನು ದೈವದತ್ತವಾಗಿ ಪಡೆದುಕೊಂಡು ರಾಜಕಾರಣಿ ಮಾತ್ರವಲ್ಲದೆ, ತನ್ನ ಯಕ್ಷ ಕಲಾಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ,ಪಕ್ಕದ ಉತ್ತರ ಕನ್ನಡ ಜಿಲ್ಲೆ ಯಕ್ಷಲೋಕದಲ್ಲಿ ಮಿಂದೆಂದೂ, ಅವರ ಇಚ್ಛೆಯಂತೆ ಯಕ್ಷ ಬದುಕಿನ ವಿಶಿಷ್ಟ ಸ್ಥಾನಮಾನವನ್ನು ಗುರುತಿಸಿಕೊಂಡಿದ್ದಾರೆ. ಆದರೆ ಅವರ ಬದುಕು ಯಕ್ಷಗಾನದ ಲೀಲ ಗರ್ಭದಲ್ಲಿ ಲೀನವಾಗಿರುವುದು ಬಹಳ ನೋವಿನ ಸಂಗತಿ. ಅಗಲಿದ ಮೇರು ಕಲಾವಿದ ಕುಂಬಳೆ ಸುಂದರ್ ರವರಿಗೆ ಭಾವಪೂರ್ಣ ನಮನಗಳು.