ಡೈಲಿ ವಾರ್ತೆ: 30 ಡಿಸೆಂಬರ್ 2022

ಜೈ ಶ್ರೀರಾಮ್ ಘೋಷಣೆ ಹೇಳಲಿಲ್ಲ ಎಂದು 10 ವರ್ಷದ ಬಾಲಕನ ಮೇಲೆ ಹಲ್ಲೆ

ಜೈ ಶ್ರೀರಾಮ್ ಘೋಷಣೆ ಹೇಳಲಿಲ್ಲ ಎಂದು 10 ವರ್ಷದ ಬಾಲಕನ ಮೇಲೆ ಹಲ್ಲೆ

ಟ್ಯೂಷನ್ ಗೆ ತೆರಳುತ್ತಿದ್ದ 10 ವರ್ಷದ ಬಾಲಕನಿಗೆ ತಡೆದು ಜೈಶ್ರೀರಾಂ ಘೋಷಣೆ ಕೂಗುವಂತೆ ಆಗ್ರಹಿಸಿ ಥಳಿತ

ಮಧ್ಯಪ್ರದೇಶ: ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿ 10 ವರ್ಷದ ಮುಸ್ಲಿಂ ಬಾಲಕನಿಗೆ ಥಳಿಸಿದ ಘಟನೆ ಖಾಂಡ್ವಾ ಜಿಲ್ಲೆಯ ಪಂಧಾನಾ ಪ್ರದೇಶದಲ್ಲಿ ನಡೆದಿದೆ.

5ನೇ ತರಗತಿ ವಿದ್ಯಾರ್ಥಿ ಟ್ಯೂಷನ್ ಸೆಂಟರ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.ಬಾಲಕನ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.

ಆರೋಪಿ 21 ವರ್ಷದ ಕಾರ್ಮಿಕನಾಗಿದ್ದು, ಆತನ ವಿರುದ್ಧ ವಿವಿಧ ಸೆಕ್ಸನ್ ಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸಿಂಗ್ ಚೌಹಾಣ್ ಹೇಳಿದ್ದಾರೆ.