ಡೈಲಿ ವಾರ್ತೆ: 31 ಡಿಸೆಂಬರ್ 2022

ಆಟವಾಡುವಾಗ ಸೀರೆ ಜೋಲಿ ಕುತ್ತಿಗೆಗೆ ಸುತ್ತಿಕೊಂಡು ಬಾಲಕ ಮೃತ್ಯುಮಂಡ್ಯ: ಸೀರೆ ಜೋಲಿ ಕುತ್ತಿಗೆಗೆ ಸುತ್ತಿಕೊಂಡು ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆ ಬೇವಿನಹಳ್ಳಿ ಕೊಪ್ಪಲು ಗ್ರಾಮದಿಂದ ವರದಿಯಾಗಿದೆ.

ಶ್ರೀನಿವಾಸ ಅವರ ಪುತ್ರ 9 ವರ್ಷದ ಸಮರ್ಥ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಸಮರ್ಥ್ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದ.

ಶಾಲೆ ಬಿಟ್ಟು ಮನೆಗೆ ಬಂದಿದ್ದ ಬಾಲಕ, ಸೀರೆಯಿಂದ ಕಟ್ಟಿದ್ದ ಜೋಲಿಯಲ್ಲಿ ಆಟವಾಡುವಾಗ ಜೋಲಿ ಕತ್ತಿಗೆ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಪೋಷಕರು‌ ನೋಡಿದ ತಕ್ಷಣ ಬಾಲಕನಿಗೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.