ಡೈಲಿ ವಾರ್ತೆ: 31 ಡಿಸೆಂಬರ್ 2022

ಕ್ಷುಲ್ಲಕ ಕಾರಣಕ್ಕೆ ಕೆಎಸ್ಆರ್ ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ದ್ವಿಚಕ್ರ ಸವಾರನಿಂದ ಹಲ್ಲೆ, ವಿಡಿಯೋ ವೈರಲ್

ಹೊನ್ನಾವರ: ಓವರ್ ಟೇಕ್ ಮಾಡುವ ವಿಚಾರದಲ್ಲಿ ಜಗಳವಾಗಿ ಬೈಕ್ ಸವಾರನೋರ್ವ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ.

ಹೊನ್ನಾವರ ಡಿಪ್ಪೋಗೆ ಸೇರಿದ ಬಸ್ಸಿನ ಚಾಲಕ ಕೃಷ್ಣಾ
ನಾಯ್ಕ ನಿರ್ವಾಹಕ ಮರಿಯಪ್ಪ ಹಲ್ಲೆಗೊಳಗಾದವರಾಗಿದ್ದಾರೆ.

ತಾಲೂಕಿನ ಟೊಂಕ ಬಳಿ ಪ್ರಯಾಣಿಕರನ್ನ ಇಳಿಸಿ ತೆರಳುವಾಗ ಓವರ್ ಟೇಕ್ ಮಾಡುವ ಸಂದರ್ಭ ಬಸ್ಸಿನ ಚಾಲಕ ಹಾಗೂ ಬೈಕ್ ಸವಾರನ ನಡುವೆ ಜಗಳವಾಗಿದೆ.

ಬೈಕ್ ಸವಾರ ಸಾರಿಗೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಹಲ್ಲೆ ಮಾಡುವ ದೃಶ್ಯವನ್ನ ಪ್ರಯಾಣಿಕರೋರ್ವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಇನ್ನು ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವುದಕ್ಕೆ ಹಲವರು ಖಂಡನೆ ಸಹ ವ್ಯಕ್ತಪಡಿಸಿದ್ದಾರೆ.