ಡೈಲಿ ವಾರ್ತೆ:09 ಜನವರಿ 2023

ಪ್ಲಾಸ್ಟಿಕ್ ಮುಕ್ತ ಜಾತ್ರೆಯಾಗಿಸಲು ಭಕ್ತಾಧಿಗಳಲ್ಲಿ ಕೋಟ ಆರಕ್ಷಕ ಠಾಣಾಧಿಕಾರಿ ಮಧು ಬಿ. ಇ. ಮನವಿ

ಕೋಟ: ಪರಿಸರಕ್ಕೆ ಹಾನಿಯಾಗಿಸುವ ಪ್ಲಾಸ್ಟಿಕ್ ಕೈಚೀಲ, ಜರಿಗಳನ್ನು ಸಂಪೂರ್ಣವಾಗಿ ಜಾತ್ರೆಯಲ್ಲಿ ನಿಷೇಧಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಮುಕ್ತ ಆಂದೋಲನವನ್ನು
ಕೋಟ ಅಮೃತೇಶ್ವರಿ ದೇವಳ ಹಾಗೂ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳ ಮಂಡಲ, ಕೋಟ ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಇವರುಗಳ‌ ನೇತ್ರತ್ವದಲ್ಲಿ ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸ.ಪ್ರ.ಕಾಲೇಜು, ಕೋಟ ಗ್ರಾ.ಪಂ, ಎಸ್ ಎಲ್ ಆರ್ ಎಂ ಘಟಕ, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಜಾತ್ರೆ ಶೀರ್ಷಿಕೆಯಡಿ ಆಂದೋಲನ ಹಮ್ಮಿಕೊಂಡಿದೆ.

ಈ ಪ್ಲಾಸ್ಟಿಕ್ ಮುಕ್ತ ಆಂದೋಲನಕ್ಕೆ ಕೋಟ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೋಟ ಪೊಲೀಸ್ ಠಾಣಾಧಿಕಾರಿ ಮಧು ಬಿ. ಇ. ತಿಳಿಸಿದ್ದಾರೆ.