ವರದಿ : ಕುಮಾರ್ ನಾಯ್ಕ್ ಉಪ ಸಂಪಾದಕರು


ನೆಲಮಂಗಲ-ಕರ್ನಾಟಕ ರಣಧೀರರ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳಿಂದ ಡಾ. ಬಿ. ಆರ್.ಅಂಬೇಡ್ಕರ್ ಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮ ಜರುಗಿಸುವಂತೆ ಇಂದು ನೆಲಮಂಗಲ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನೆಲಮಂಗಲ ತಾಲ್ಲೂಕು ತಹಸೀಲ್ದಾರ್ ರವರ ಮುಖೇನ ಕರ್ನಾಟಕ ರಾಜ್ಯ ರಾಜ್ಯಪಾಲರಿಗೆ , ಮುಖ್ಯಮಂತ್ರಿಗಳಿಗೆ ಹಾಗೂ ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ರವರು ದಿನಾಂಕ : 26-01-2022 ರಾಯಚೂರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಂವಿಧಾನ ದಿನಾಚರಣೆ-ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ್ ಗೌಡ (ಲಿಂಗಾಯತ ಗೌಡ) ಇವರು ವೃತ್ತಿ ಗೌರವಕ್ಕೆ ಅವಮಾನ ಮಾಡಿದಲ್ಲದೆ, ಸಂವಿಧಾನಕ್ಕೆ ಮತ್ತು ಭಾರತ ರತ್ನ, ಮಹಾ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುತ್ತಾರೆ. ಇವರು ನ್ಯಾಯಾಧೀಶರ ಸ್ಥಾನಕ್ಕೆ ಅರ್ಹತೆಯುಳ್ಳವರಲ್ಲ.

ಆದ ಕಾರಣ
ಮಾನ್ಯ ಉಚ್ಚನ್ಯಾಯಾಲಯವೂ ಸ್ವಯಂಪ್ರೇರಿತವಾಗಿ- (highcourt sumoto power) ಯಿಂದ ರಾಯಚೂರು ಜಿಲ್ಲಾ ನ್ಯಾಯದೀಶ ಮಲ್ಲಿಕಾರ್ಜುನ್ ಗೌಡ (ಲಿಂಗಾಯತ ಗೌಡ) ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಜೈಲು ಬಂಧಿಯನ್ನಾಗಿಸಬೇಕು, ಅಲ್ಲದೇ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲೀಸಬೇಕು.& ವೃತ್ತಿಯಿಂದ ವಜಾ ಮಾಡಬೇಕು ಎಂದು ಈ ಮೂಲಕ ಕರ್ನಾಟಕ ರಣಧೀರರ ವೇದಿಕೆ ಆಗ್ರಹಿಸುತ್ತದೆ ಎಂದು ಹೇಳಿದರು.

ಈ ಸಂವಿಧಾನ ವಿರೋಧಿ ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮ ಜರುಗಿಸಿ ವಜಾ ಮಾಡದಿದ್ದಲ್ಲಿ ರಾಜ್ಯಾದ್ಯಂತ ಬೃಹತ್ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್ ರವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ದಲಿತ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಬಿ.ಆರ್ ಭಾಸ್ಕರ್ ಪ್ರಸಾದ್, ಕರವೇ ಕನ್ನಡಿಗರ ಧ್ವನಿ ರಾಜ್ಯಾಧ್ಯಕ್ಷ ಮಲ್ಲೇಶ್, ಕರ್ನಾಟಕ ರಣಧೀರರ ವೇದಿಕೆಯ ನೆಲಮಂಗಲ ತಾಲ್ಲೂಕು ಅಧ್ಯಕ್ಷ ಕಾಂತ್ ಕುಮಾರ್, ಮುನಿರಾಜು, ಶಂಕರ್ ನಾಗು, ವಕೀಲರಾದ ಕನಕರಾಜು, DSS ನಾಗರಾಜು, DSS ನಾರಾಯಣಸ್ವಾಮಿ, ಕಸಪಾ ಪ್ರದೀಪ್ ಮತ್ತಿತರರು ಹಾಜರಿದ್ದರು.