ಕೋಟ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎರಡು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಾಯಗೊಂಡವರಲ್ಲಿ ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ 7 : 30ರ ಸುಮಾರಿಗೆ ಕೋಟ ಹೈಸ್ಕೂಲ್ ಎದುರುಗಡೆ ನಡೆದಿದೆ.

ಮಂಗಳೂರುನಿಂದ ಹೊನ್ನಾವರ ಹೋಗುತಿದ್ದ ಬೈಕ್ ಕೋಟದಿಂದ ಹೈಸ್ಕೂಲ್ ಕಡೆ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ರಸ್ತೆಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ವ್ಯಕ್ತಿ ಕೋಟ ಮೊಬೈಲ್ ಮನೆ ಗಿರೀಶ್ ಹಂದೆ ಎಂದು ತಿಳಿಯಲಾಗಿದೆ. ಇವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.


ಸಣ್ಣ ಪುಟ್ಟ ಗಾಯಗೊಂಡ ಹೊನ್ನಾವರದ ಇಸ್ಮಾಯಿಲ್ ಹಾಗೂ ಶಾಹುಲ್ ಇವರನ್ನು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಸೇರಿಸಲಾಗಿದ್ದು.


ಗಾಯಗೊಂಡವರನ್ನು ತಕ್ಷಣ ಕೋಟ ಜೀವನ ಮಿತ್ರ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಹಾಗೂ ವಸಂತ್ ಸುವರ್ಣ ಇವರು ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸುವಲ್ಲಿ ಸಹಕರಿಸಿದರು.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.