ಡೈಲಿ ವಾರ್ತೆ:19 ಮಾರ್ಚ್ 2023

ಕೋಟ- ಶಾಂಭವೀ ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸದಾನಂದ ಗಿಳಿಯಾರು ಆಯ್ಕೆ

ಕೋಟ: ಇಲ್ಲಿನ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸದಾನಂದ ಗಿಳಿಯಾರು
ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವಿಷ್ಣುಮೂರ್ತಿ ಮಯ್ಯ ಮಣೂರು,
ಲಿಯಾಕಾತ್ ಆಲಿ, ಸುಧಾ ಮಣೂರು, ಇಬಾಹಿಂ ಸಾಹೇಬ್, ರಾಜಶೇಖರ ಹಂದೆ, ಕೃಷ್ಣಮೂರ್ತಿ ಉರಾಳ, ಕಾರ್ಯದರ್ಶಿಯಾಗಿ ಸಂತೋಷ್ ಪ್ರಭು, ಜತೆಕಾರ್ಯದರ್ಶಿಯಾಗಿ ಪ್ರಕಾಶ್ ಜೋಗಿ, ರವೀಂದ್ರ ಕೋಟ, ಕೋಶಾಧಿಕಾರಿಯಾಗಿ ಜಿ.ಸತೀಶ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್
ಐತಾಳ್ ಹಾಗೂ ಸಂಚಾಲಕ ಸಚಿನ್ ಕಾರಂತ್ ನಿರ್ದೇಶನದ ಮೇರೆಗೆ ನೂತನ ಸಮಿತಿ ರಚಿಸಲಾಗಿದೆ.