ಡೈಲಿ ವಾರ್ತೆ:19 ಮಾರ್ಚ್ 2023

ಕೋಟ ಪಂಚವರ್ಣ ಸಂಸ್ಥೆಯ ನೇತ್ರತ್ವದಲ್ಲಿ 156ನೇ ಸ್ವಚ್ಛತಾ ಅಭಿಯಾನ

ಕೋಟ: ಕೋಟ ಪಂಚವರ್ಣ ಯುವಕ ಮಂಡಲ ಇದರ ಅಂಗ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ
ಮಣೂರು ಫ್ರೆಂಡ್ಸ್ , ಹಂದಟ್ಟು ಮಹಿಳಾ ಬಳಗ ಕೋಟ, ಕೋಟ ಗ್ರಾಮಪಂಚಾಯತ್ ಸಹಯೋಗದೊಂದಿಗೆ 156ನೇ ವಾರದ
ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನ ಭಾನುವಾರ ಮಣೂರು ರಾಷ್ಟ್ರೀಯ ಹೆದ್ದಾರಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಮೂಲಕ
ನಡೆಯಿತು.


ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೋಟ ಗ್ರಾಮಪಂಚಾಯತ್ ಮಣೂರು ಭಾಗದ ಸದಸ್ಯ ಶಿವರಾಮ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಅಚಾರ್ಯ, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕೋಟ ಪಂಚವರ್ಣ ಯುವಕ ಮಂಡಲ
ಇದರ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ
156ನೇ ವಾರದ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನ ನಡೆಯಿತು. ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್
ದೇವಾಡಿಗ, ಕೋಟ ಗ್ರಾಮಪಂಚಾಯತ್ ಮಣೂರು ಭಾಗದ ಸದಸ್ಯ ಶಿವರಾಮ ಶೆಟ್ಟಿ, ಪಂಚವರ್ಣ ಯುವಕ ಮಂಡಲದ
ಅಧ್ಯಕ್ಷ ಅಜಿತ್ ಆಚಾರ್ಯ ಇದ್ದರು.