ಡೈಲಿ ವಾರ್ತೆ:19 ಮಾರ್ಚ್ 2023

ಗಂಗಾವತಿ: ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; ಇಬ್ಬರಿಗೆ ಮಾರಣಾಂತಿಕ ಹಲ್ಲೆ

ಗಂಗಾವತಿ: ಕ್ಷುಲ್ಲಕ ಕಾರಣಕ್ಕೆ ಎರಡು ಯುವಕರ ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿ ಇಬ್ಬರು ಯುವಕರಿಗರ ಮಾರಣಾಂತಿಕ ಗಾಯಗಳಾದ ಘಟನೆ ರಾಯಚೂರು ಗಂಗಾವತಿ ರಸ್ತೆ ವಿದ್ಯಾನಗರದ ಹತ್ತಿರ ಭಾನುವಾರ ಸಂಜೆ ಜರುಗಿದೆ. ಮಾರುತಿ(28) ಭರತ್ (24) ಇವರ ಗಾಯಗಳಾಗಿದ್ದ ಯುವಕರಾಗಿದ್ದು ಇವರ ಪೈಕಿ ಮಾರುತಿಗೆ ತಲೆಗೆ ತೀವ್ರ ಗಾಯಗಳಾದ ಕಾರಣ ಹುಬ್ಬಳ್ಳಿ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ . ಇನ್ನೊರ್ವ ಗಾಯಾಳು ಭರತ್ ನನ್ನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಯನಗರದ ಮನೆಯೊಂದರಲ್ಲಿ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎರಡು ಯುವಕರ ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಆರಂಭವಾಗಿದೆ. ಅಲ್ಲಿದ್ದ ಯುವಕರ ಪೈಕಿ ಇಬ್ಬರು ಬೈಕ್ ನಲ್ಲಿ ವಿದ್ಯಾನಗರದ ಕಡೆ ಹೋಗುವಾಗ ಮತ್ತೊಂದು ಗುಂಪಿನ ಯುವಕರು ಮಾರಕಾಸ್ತ್ರ ಹಾಗೂ ಕಲ್ಲಿನಿಂದ ಹೊಡೆದಾಟ ಮಾಡಿದ್ದರಿಂದಾಗಿ ಮಾರುತಿ ಹಾಗೂ ಭರತ್ ತಲೆಗೆ ತೀವ್ರ ಗಾಯಗಳಾಗಿದ್ದು ಇಬ್ಬರೂ ಕೋಮಾದಲ್ಲಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮಾರುತಿಯನ್ನು ಹುಬ್ಬಳ್ಳಿಗೆ ಕಳಿಸಲಾಗಿದೆ.

ಈ ಮಧ್ಯೆ ಸರಕಾರಿ ಆಸ್ಪತ್ರೆಯಲ್ಲಿ ಪುನಹ ಎರಡು ಗುಂಪುಗಳ ಸದಸ್ಯರು ಪರಸ್ಪರ ಹೊಡೆದಾಟ ನಡೆಸಿದಾಗ ಪೊಲೀಸರು ಜಗಳ ಬಿಡಿಸಿ ಕಳಿಸಿದ್ದಾರೆ. ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಕೆಲವು ಯುವಕರನ್ನು ನಗರ ಪೊಲೀಸ್ ಕ್ರೈಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.