ಡೈಲಿ ವಾರ್ತೆ:29 ಮಾರ್ಚ್ 2023
ಕೋಟತಟ್ಟು ಗ್ರಾಮ ಪಂಚಾಯತಿನ ವಿಶೇಷ ಗ್ರಾಮ ಸಭೆ: ಸುರುಮಿ ಮೀನು ಸಂಸ್ಕರಣಾ ಘಟಕಕ್ಕೆ ಗ್ರಾಮಸ್ಥರಿಂದ ಬಾರಿ ವಿರೋಧ ವ್ಯಕ್ತ!
ಕೋಟ: ಶಿವರಾಮ ಕಾರಂತರು ಹುಟ್ಟಿದ ಈ ನೆಲದಲ್ಲಿ ಪರಿಶುದ್ಧ ವಾತಾನರಣ ನೀಡಲು ಸ್ಥಳೀಯಾಡಳಿತಕ್ಕೆ ಸಾಧ್ಯವಾಗಿಲ್ಲ ನೀವುಗಳೇ ಸ್ಥಳೀಯ ಕಾರ್ಖಾನೆಗಳಿಗೆ ಲೈಸನ್ಸ್ ನೀಡುತ್ತಿರಿ ಎಂದು ಗ್ರಾಮದ ಸೀತಾರಾಮ್ ಮಧ್ಯಸ್ಥ ಆಕ್ರೋಶ ಹೊರಹಾಕಿದ ಘಟನೆ ಬುಧವಾರ ನಡೆಯಿತು.
ಕೋಟತಟ್ಟು ಗ್ರಾಮ ಪಂಚಾಯತ್ ನಲ್ಲಿ ಮಾ. 29 ರಂದು ಬುಧವಾರ ನಡೆದ ವಿಶೇಷ ಗ್ರಾಮಸಭೆಯಲ್ಲಿ ಈ ವಿಚಾರ ಮಾತನಾಡಿದರು.
ಈ ಬಗ್ಗೆ ಧ್ವನಿಗೂಡಿಸಿದ ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜೀತ್ ಕುಮಾರ್ ನಮ್ಮ ಭಾಗದಲ್ಲಿ ಈಗಾಗಲೇ ಗರ್ಭಿಣಿಯರು, ವಯೋವೃದ್ಧರು, ಮಕ್ಕಳು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಕಳೆದೊಂದು ವರ್ಷದಲ್ಲೆ ಸಾಕಷ್ಡು ಸಾವುಗಳು ಕಂಡಿವೆ ಪ್ರಸ್ತುತ ಕಾರ್ಖಾನೆಗಳು ಪರಿಸರಕ್ಕೆ ಪೂರಕವಾಗಿ ಕಾರ್ಯಾಚರಿಸಬೇಕು ಅಂತಹ ಕೈಗಾರಿಕೆಗಳಿಗೆ ಪಂಚಾಯತ್ ಅನುವುಮಾಡಿಕೊಡಬೇಕು ಒಂದೊಮ್ಮೆ ಗ್ರಾಮಸ್ಥರಿಗೆ ಸಮಸ್ಯೆಯಾಗಿ ಕಂಡುಬಂದರೆ ಅಂತವರ ಲೈಸನ್ಸ್ ರದ್ಧುಗೊಳಿಸಿ ಕಾರ್ಯನಿರ್ವಹಿಸದಂತೆ ನೋಡಿಕೊಳ್ಖಬೇಕು ಎಂದು ಸಲಹೆ ಇತ್ತರು.
ಈ ಕುರಿತು ಪಂಚಾಯತ್ ಪ್ರತಿನಿಧಿಗಳು ಉತ್ತರಿಸಿ ಪ್ರಸ್ತುತ ಎಲ್ಲಾ ಕಾರ್ಖಾನೆಗಳಿಗೆ ಪಂಚಾಯತ್ ಲೈಸನ್ಸ್ ನೀಡಿಲ್ಲ ಈ ಮೊದಲಿನ ಆಡಳಿತ ವರ್ಗ ಲೈಸನ್ಸ್ ನೀಡಿದೆ ಎಂದು ಸ್ಥಳೀಯಾಡಳಿತಗಳನ್ನು ದೂರುವುದು ಸಂಮಜಸವಲ್ಲ ಎಂದರು.
ಗ್ರಾಮಪಂಚಾಯತ್ ಗ್ರಾಮಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಬೆಲೆಯೇ ಇಲ್ಲವಾ ಸುರುಮಿ ಮೀನುಸಂಸ್ಕರಣಾ ಘಟಕಕ್ಕೆ ಗ್ರಾಮಸಭೆಯಲ್ಲಿ ವಿರೋಧ ವ್ಯಕ್ತವಾಗಿ ನಿರ್ಣಯ ಸಹ ಕೈಗೊಳ್ಳಲಾಗಿದೆ. ಆದರೆ ಅಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಹಾಗಾದರೆ ಪಂಚಾಯತ್ ಏಕೆ ಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಬಗ್ಗೆ ಉಲ್ಲೇಖಿಸಿದ ಕಾರ್ಖಾನೆ ಮುಖ್ಯಸ್ಥ ನಮ್ಮ ಕಾರ್ಖಾನೆ ಸಾಕಷ್ಟು ಒಳಭಾಗದಲ್ಲಿದೆ ನಮ್ಮ ಕಾರ್ಖಾನೆ ಕಡಿವಾಣ ಹಾಕುದು ಎಷ್ಟು ಸರಿ ಎಂದರು. ಈ ಬಗ್ಗೆ ಗ್ರಾಮಸ್ಥರು ಮತ್ತು ಕಾರ್ಖಾನೆ ಮುಖ್ಯಸ್ಥರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಕಾರ್ಖಾನೆ ಮುಖ್ಯಸ್ಥರು ಕ್ಷೇಮೆ ಕೇಳಿ ಸಭೆ ಮುಂದುವರೆಯಿತು.
ಇಟಿಪಿ ನಿರ್ವಹಣೆ ಸಮರ್ಪಕವಾಗಲಿ ಗ್ರಾಮಸ್ಥರ ಆಗ್ರಹ:
ಕೋಟತಟ್ಟು ಗ್ರಾಮಪಂಚಾಯತ್ ಗಳಲ್ಲಿ ಸಾಕಷ್ಟು ಮೀನು ಸಂಸ್ಕರಣಾ ಘಟಕಗಳಿವೆ ಅವಗಳ ಕಲುಷಿತ ನೀರು ನೇರವಾಗಿ ಸಮುದ್ರ ತಲುಪುತ್ತಿವೆ ಈ ಬಗ್ಗೆ ಸಮರ್ಪಕ ಮಾರ್ಗಸೂಚಿ ಪರಿಸರ ಇಲಾಖೆ ನೀಡಬೇಕು ಅಲ್ಲದೆ ಸುರುಮಿ ಮೀನು ಸಂಸ್ಕರಣಾ ಘಟಕಕ್ಕೆ ಇಲಾಖೆ ಪ್ರಮಾಣಪತ್ರ ನೀಡಿದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಈ ಬಗ್ಗೆ ಉಡುಪಿ ಪರಿಸರ ಇಲಾಖಾಧಿಕಾರಿ ಡಾ.ಕೆ.ಎಂ ರಾಜು ಮಾತನಾಡಿ ಪರಿಸರ ಇಲಾಖೆಯಿಂದ ಇದುವರೆಗೆ ಸುರುಮಿ ಮೀನು ಸಂಸ್ಕರಣಾ ಘಟಕದಿಂದ ಯಾವುದು ಪತ್ರ ಬಂದಿಲ್ಲ ಬಂದರೂ ಗ್ರಾಮಪಂಚಾಯತ್ ಪರಿಗಣನೆಗೆ ತರಲಾಗುವುದು ಸ್ಥಳೀಯ ಎಲ್ಲಾ ಮೀನು ಸಂಸ್ಕರಣಾ ಘಟಕಗಳು ಸಮರ್ಪಕ ಇ.ಟಿ.ಪಿ ನಿರ್ವಹಿಸಲು ನಿರ್ದೇಶನ ಈಗಾಗಲೇ ನೀಡಲಾಗಿದೆ ಎಂದು ಹೇಳಿದರು.
ಸಾಮಾನ್ಯ ಮನೆಗೆ ಲೈಸನ್ಸ್ ನೀಡಲು ಮೀನಾಮೇಷ ಎಣಿಸುತ್ತಿರಿ ಕಾರ್ಖಾನೆ ಲೈಸನ್ಸ್ ಗ್ರಾಮಸ್ಥರ ಪರಿಗಣನೆ ಪಡೆಯದೆ ನೀಡುತ್ತಿರಿ ಪ್ರಸ್ತುತ ಕಾರ್ಖಾನೆ ಕಟ್ಟಡ ನವೀಕರಣ ಕಾಮಗಾರಿ ನಡೆಯುತ್ತಿದೆ ಅದಕ್ಕೆ ಕಡಿವಾಣ ಹಾಕಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪಂಚಾಯತ್ ಸ್ಪಷ್ಟೀಕರಣ:
ಸುರುಮಿ ಅಂತಹ ಮೀನು ಸಂಸ್ಕರಣಾ ಘಟಕಕ್ಕೆ ಯಾವುದೇ ರೀತಿಯ ಲೈಸನ್ಸ್ ನೀಡುವುದಿಲ್ಲ ಅಲ್ಲದೆ ಪ್ರಸ್ತುತ ಪಂಚಾಯತ್ ನಿರ್ದೇಶನ ಮೀರಿ ಕಟ್ಟಡ ನಿರ್ಮಾಣದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಒಂದೊಮ್ಮೆ ಕಾರ್ಖಾನೆ ಸಂಬಂಧಿಸಿದ ಕೋಟ್೯ ಕಟಕಟಲೆ ಏರಿದರೆ ಪಂಚಾಯತ್ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧವಿದೆ. ಎಲ್ಲಾ ರೀತಿಯ ಮೀನು ಸಂಸ್ಕರಣಾ ಘಟಕಗಳು ಸಮರ್ಪಕ ಇಟಿಪಿ ಹೊಂದಬೇಕು ಎಂಬ ಗಟ್ಟಿನಿರ್ಧಾವನ್ನು ಪಂಚಾಯತ್ ಗ್ರಾಮಸ್ಥರ ಮುಂದೆ ಕೈಗೊಂಡಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು. ಉಪಾಧ್ಯಕ್ಷ ವಾಸು ಪೂಜಾರಿ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಭೆಯನ್ನು ನಿರ್ವಹಿಸಿದರು. ಕಾರ್ಯದರ್ಶಿ ಸುಮತಿ ವಂದಿಸಿದರು.