ಡೈಲಿ ವಾರ್ತೆ:18 ಆಗಸ್ಟ್ 2023
ದಕ್ಷಿಣ ಕನ್ನಡ: ವಿದ್ಯಾರ್ಥಿಗಳಿಂದ ಸಾವರ್ಕರ್‌ಗೆ ಜೈ ಘೋಷಣೆ – ಸ್ಥಳೀಯ ವ್ಯಕ್ತಿಯಿಂದ ಆಕ್ಷೇಪಣೆ, ಮುಖ್ಯ ಶಿಕ್ಷಕಿಯಿಂದ ಕ್ಷಮೆಯಾಚನೆ
ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳದ ಮಂಚಿ ಸರ್ಕಾರಿ ಶಾಲೆಯಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವ ದಿನಾಚರಣೆಯದಂದು ಶಾಲಾ ಮಕ್ಕಳು ಸಾವರ್ಕರ್‌ಗೆ ಜೈ ಘೋಷಣೆ ಕೂಗಿಸಿದ ಬಗ್ಗೆ ಭಾರೀ ವಿವಾದ ಹುಟ್ಟುಕೊಂಡ ಘಟನೆ ನಡೆದಿದೆ
ಶಾಲೆಯ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಹಾಕಿಸಿದ್ದರು ಹಾಗೆ ವೀರ ಸಾವರ್ಕರ್ ಗೂ ಜೈಕಾರ ಹಾಕಿಸಿದ್ದಾರೆ. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ವೀಡಿಯೋ ಮಾಡಿ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಸಾವರ್ಕರ್ ಗೆ ಜೈಕಾರ ಹಾಕಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.
ಈ ವಿಚಾರದಲ್ಲಿ ವಿವಾದ ಹುಟ್ಟಿಕೊಂಡು ಶಾಲೆಯಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆ ನಡೆಸಿ ಈ ವೇಳೆ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಹಾಗೂ ಕೆಲ ರಾಜಕೀಯ ಮುಖಂಡರು ಆಗ್ರಹಿಸಿ ಗಲಾಟೆ ಮಾಡಿದರು.
ಇದರಿಂದಾಗಿ ಮನನೊಂದು ಮುಖ್ಯ ಶಿಕ್ಷಕಿ ಕ್ಷಮೆಯಾಚಿಸುವುದರೊಂದಿಗೆ ಪ್ರಕರಣ ಇತ್ಯರ್ಥಗೊಂಡಿತು.
ಆದರೆ ಶಾಲೆಯಲ್ಲಿ ನಡೆದ ವಿಚಾರವನ್ನು ವಿಡಿಯೋ ಮಾಡಿ ವೈರಲ್ ಮಾಡಿರುವ ಬಗ್ಗೆ ಅಸಮಧಾನ ಗೊಂಡ ಮುಖ್ಯ ಶಿಕ್ಷಕಿ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.