



ಡೈಲಿ ವಾರ್ತೆ: 23/April/2024


ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ಗಳ ಪತನ, 10 ಮಂದಿ ಸಾವು
ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಪತನವಾಗಿ 10 ಮಂದಿ ಸಾವನ್ನಪ್ಪಿದ್ದಾರೆ. ಇಂದು ಪೆರಾಕ್ನ ಲುಮುಟ್ನಲ್ಲಿ ಎರಡು ರಾಯಲ್ ಮಲೇಷಿಯನ್ ನೌಕಾಪಡೆಯ ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.
ಫ್ರೀ ಮಲೇಷ್ಯಾ ಟುಡೇ ವರದಿ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ. ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.