ಡೈಲಿ ವಾರ್ತೆ: 09/ಮೇ /2024
ಕರ್ನಾಟಕ ಎಸ್ಎಸ್ಎಲ್ ಸಿ 2024ರ ಫಲಿತಾಂಶ: ಬಾಲಕಿಯರದ್ದೇ ಮೇಲುಗೈ- ಉಡುಪಿಗೆ ಪ್ರಥಮ ಸ್ಥಾನ
ಕರ್ನಾಟಕ ಎಸ್ಎಸ್ಎಲ್ ಸಿ 2024ರ ಫಲಿತಾಂಶದಲ್ಲಿ ಬಾಲಕಿಯರದ್ದೇ ಮೇಲುಗೈ- ಉಡುಪಿಗೆ ಪ್ರಥಮ ಸ್ಥಾನ ಲಬಿಸಿದೆ.
ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಲಿಂಗವಾರು ಒಟ್ಟಾರೆ ಫಲಿತಾಂಶ: ಬಾಲಕರು:2,87,416(65.90) ಬಾಲಕಿಯರು’-3,43,788(81.11%) SSLC ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಶೇಕಡಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆ :- 1)ಉಡುಪಿ ಪ್ರಥಮ ಸ್ಥಾನ(94%)
2)ದಕ್ಷಿಣ ಕನ್ನಡ ,ದ್ವೀತಿಯ ಸ್ಥಾನ(92.12%)
3)ಶಿವಮೊಗ್ಗ (88.67%) ರಾಜ್ಯದಲ್ಲಿ ಶೇಕಡಾವಾರು ಕೊನೆ ಸ್ಥಾನ ಪಡೆದ ಜಿಲ್ಲೆ:- 1)ಯಾದಗಿರಿ 50.59% ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಎನ್ ಮಂಜುಶ್ರೀ ,ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್, SSLC ಬೋರ್ಡ್ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.