ಡೈಲಿ ವಾರ್ತೆ: 16/ಮೇ /2024

ಕರಾವಳಿ: ಮೇ. 16 ರಿಂದ 19ರ ವರೆಗೆ ಸಿಡಿಲಿನಿಂದ ಕೂಡಿದ ಮಳೆ ಸಾಧ್ಯತೆ – 4 ದಿನ ಎಲ್ಲೋ ಅಲರ್ಟ್‌

ಕರಾವಳಿ: ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಮೇ 16ರಿಂದ 19ರ ವರೆಗೆ ಕರಾವಳಿಯಲ್ಲಿ “ಎಲ್ಲೋ ಅಲರ್ಟ್‌’ ಘೋಷಿಸಿದೆ. ಈ ವೇಳೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.

ಬೆಳ್ತಂಗಡಿ ತಾಲೂಕಿನ ಹಲವು ಕಡೆ, ಕುಕ್ಕೆ ಸುಬ್ರಹ್ಮಣ್ಯ ಸಹಿತ ಹಲವು ಕಡೆ ಗಳಲ್ಲಿ ಬುಧವಾರ ಉತ್ತಮ ಮಳೆ ಯಾಗಿದೆ. ಮಂಗಳೂರು ಸಹಿತ ಹಲವು ಕಡೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ 33.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ 0.5 ಡಿ.ಸೆ. ಕಡಿಮೆ, 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಕಡಿಮೆ ದಾಖಲಾಗಿತ್ತು.