ಡೈಲಿ ವಾರ್ತೆ: 19/ಮೇ /2024

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ- ದಂಪತಿ ಬಲಿ!

ಕಾಸರಗೋಡು: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ದಂಪತಿಗಳು ಮೃತಪಟ್ಟ ಘಟನೆ ಭಾನುವಾರ  ಬೆಳಗ್ಗೆ ಬೇತೂರುಪಾರ ಬಳಿ  ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಸ್ಕೂಟರ್ ಸವಾರ ಕೆ.ಕೆ ಕೃಷ್ಣನ್(71) ಮತ್ತು ಅವರ ಪತ್ನಿ ಚಿತ್ರಕಲಾ( 57) ಎಂದು ಗುರುತಿಸಲಾಗಿದೆ.

ಬೋವಿಕ್ಕಾನ – ಕುತ್ತಿ ಕೋಲ್ ರಸ್ತೆಯ ಬೇತೂರು ಪಾರ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಕೃಷ್ಣನ್ ದಂಪತಿ ಸಂಚರಿಸುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ದಂಪತಿಯನ್ನನು ಪರಿಸರ ವಾಸಿಗಳು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ
ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.