ಡೈಲಿ ವಾರ್ತೆ: 13/Sep/2024
ಜಗತ್ತಿನ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್: ಈತ 7.5 ಕೋಟಿ ಸಂಪತಿನ ಒಡೆಯ!
ಮುಂಬೈ: ಮುಂಬೈನ ಭಿಕ್ಷುಕ ಭರತ್ ಜೈನ್ ಕೋಟಿ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು,7.5 ಕೋಟಿ ರೂ.ಸಂಪತ್ತಿನ ಒಡೆಯನಾಗಿದ್ದಾನೆ.
ನಾವು ಸಾಮಾನ್ಯವಾಗಿ ಭಿಕ್ಷುಕರನ್ನು ಅತ್ಯಂತ ಬಡವರು, ದೈನಂದಿನ ಉಳಿವಿಗಾಗಿ ಹೋರಾಡುವವರು ಎಂದು ಗ್ರಹಿಸುತ್ತೇವೆ. ಆದರೆ, ಒಬ್ಬ ಭಿಕ್ಷುಕ ಕೋಟಿಗಟ್ಟಲೆ ಸಂಪತ್ತನ್ನು ಸಂಪಾದಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಪರಿಗಣಿಸಲ್ಪಟ್ಟ ಭರತ್ ಜೈನ್ ಅಸಾಧಾರಣ ವ್ಯಕ್ತಿ. ಮುಂಬೈನ ನಿವಾಸಿಯಾಗಿರುವ ಭರತ್ ಜೈನ್ ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದ್ದಾರೆ. ಕಾರ್ಪೊರೇಟ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಅನೇಕ ಸುಶಿಕ್ಷಿತ ವೃತ್ತಿಪರರಿಗಿಂತ ಅವರ ಗಳಿಕೆ ಹೆಚ್ಚಾಗಿದೆ.
ತಮ್ಮ ಇಬ್ಬರು ಪುತ್ರರಿಗೆ ಶಿಕ್ಷಣ ನೀಡಿದರು ಮತ್ತು ಅವರ ಮದುವೆಯನ್ನೂ ಮಾಡಿಸಿದರು. ಇದೀಗ ಭರತ್ ಜೈನ್ ಅವರ ಒಟ್ಟು ಆಸ್ತಿ ಸುಮಾರು 7.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ದೇಶದ ಪ್ರಮುಖ ಇಂಗ್ಲಿಷ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ ಅವರ ಮಾಸಿಕ ಆದಾಯ 60 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳು ಎಂದು ತಿಳಿಸಿದೆ. ಇದು ಭಾರತದಲ್ಲಿ ಅನೇಕ ತಂತ್ರಜ್ಞಾನ ವೃತ್ತಿಪರರ ಸರಾಸರಿ ವೇತನಕ್ಕಿಂತಲೂ ಹೆಚ್ಚಾಗಿದೆ. ಕೇವಲ ಭಿಕ್ಷಾಟನೆಯಿಂದ ಬರುವ ಗಳಿಕೆಯ ಹೊರತಾಗಿ, ಭರತ್ ಹಲವಾರು ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ.
ಮುಂಬೈ ನಗರದಲ್ಲಿ ಬರೋಬ್ಬರಿ 1.4 ಕೋಟಿ ರೂ. ಮೌಲ್ಯದ ಎರಡು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿ ಬಾಡಿಗೆ ಬಿಟ್ಟಿದ್ದಾರೆ. ಅವರು ಥಾಣೆಯಲ್ಲಿ ಎರಡು ಅಂಗಡಿಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಅಂಗಡಿ ಯಾವುದೇ ಶ್ರಮವಿಲ್ಲದೇ ತಿಂಗಳಿಗೆ ರೂ. 30,000 ಬಾಡಿಗೆ ಆದಾಯವನ್ನು ತರುತ್ತದೆ. ಜೊತೆಗೆ ಈತ ಹಲವು ಕಡೆಗಳಲ್ಲಿ ಅಂಗಡಿಗಳನ್ನು ತೆರೆದು ಅಲ್ಲಿ ವ್ಯಾಪಾರಕ್ಕೆ ಮಕ್ಕಳನ್ನು ನಿಯೋಜನೆ ಮಾಡಿದ್ದಾನೆ. ಈ ಮೂಲಕ ಮಕ್ಕಳ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದಾನೆ.
ಇಷ್ಟೆಲ್ಲಾ ಸಂಪತ್ತು ಇದ್ದರೂ ಭರತ್ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಆಜಾದ್ ಮೈದಾನ್‌ನಂತಹ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಲೇ ಇದ್ದಾರೆ. ಅವರು ಪಾರೆಲ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ಓದಿದ್ದಾರೆ. ಜೈನ್ ಅವರ ಕುಟುಂಬವು ಸ್ಟೇಷನರಿ ಅಂಗಡಿಯನ್ನು ಸಹ ನಡೆಸುತ್ತಿದೆ. ಭರತ್ ಜೈನ್ ಅವರ ಕಥೆ ಎಲ್ಲರನ್ನೂ ಆಶ್ಚರ್ಯಗಳಿಸುತ್ತದೆ.