ಡೈಲಿ ವಾರ್ತೆ: 07/NOV/2024
ಕೊಟ್ಟೂರಿನ ಇಂದು ಪಿಯು ಕಾಲೇಜಿನಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡ ಶಿಕ್ಷಣಶಾಸ್ತ್ರ ವಿಷಯದ ರಾಜ್ಯ ಮಟ್ಟದ 14ನೇ ಶೈಕ್ಷಣಿಕ ಸಮ್ಮೇಳನದ ವೇದಿಕೆ
ಕೊಟ್ಟೂರು :- ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ನೆಲೆಸಿರುವ ಪವಾಡ ಪುರುಷ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಕೊಟ್ಟೂರೇಶ್ವರ ನಾಡಿನಲ್ಲಿ ಶಿಕ್ಷಣಶಾಸ್ತ್ರದ ವಿಷಯದ ರಾಜ್ಯ ಮಟ್ಟದ 14ನೇ ಶೈಕ್ಷಣಿಕ ಸಮ್ಮೇಳನಕ್ಕೆ ಇಂದು ಪದವಿ ಪೂರ್ವ ಕಾಲೇಜಿನ ವೇದಿಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಶಿಕ್ಷಣಶಾಸ್ತ್ರ ವಿಷಯದ ಶೈಕ್ಷಣಿಕ ಸಮ್ಮೇಳನಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಸಮ್ಮೇಳನದ ವಿವಿಧ ಸಮಿತಿಗಳು ತಮ್ಮ ಕಾರ್ಯದಲ್ಲಿ ನಿರತವಾಗಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಸ್ಮರಣೀಯವಾದ ಸಮ್ಮೇಳನವನ್ನಾಗಿ ರೂಪಿಸುವಲ್ಲಿ ಹೆಜ್ಜೆ ಇರಿಸಿವೆ.
ಶಿಕ್ಷಣಶಾಸ್ತ್ರ ವಿಷಯದ ರಾಜ್ಯ ಮಟ್ಟದ 14ನೇ ಶೈಕ್ಷಣಿಕ
ಸಮ್ಮೇಳನವು ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್.ಕೊಟ್ರೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗುತ್ತಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಪುಳಕ ಉಂಟು ಮಾಡುತ್ತಿದೆ.
ರಾಜ್ಯ ಮಟ್ಟದ 14ನೇ ಶೈಕ್ಷಣಿಕ ಸಮ್ಮೇಳನದ ಸಮಾರಂಭದಲ್ಲಿ ಶ್ರೀ ಉಜ್ಜೈನಿ ಜಗದ್ಗುರುಗಳು ಸಾನಿಧ್ಯ ವಹಿಸಲಿದ್ದಾರೆ. ಹಾಗೂ ಹಗರಿಬೊಮ್ಮನಹಳ್ಳಿ ಕೊಟ್ಟೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ನೇಮಿರಾಜ್ ನಾಯ್ಕ್ ರವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಬಳ್ಳಾರಿ ಸಂಸದರಾದ ಇ.ತುಕಾರಾಮ್, ಮಾಜಿ ಸಂಸದರಾದ ವೈ.ದೇವೇಂದ್ರಪ್ಪ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರಾದ ಸಿಂಧೂ ಬಿ ರೂಪೇಶ್, ಬಳ್ಳಾರಿ/ವಿಜಯನಗರ ಉಪನಿರ್ದೇಶಕರಾದ ಟಿ.ಪಾಲಾಕ್ಷ, ಉಜ್ಜಯಿನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾದ ಎಂ.ಎಂ.ಜೆ. ಹರ್ಷವರ್ಧನ, ಇಂದಿರಾ ಚಾರಿಟೆಬಲ್ ಟ್ರಸ್ಟ ನ ಅಧ್ಯಕ್ಷರಾದ ಹೆಚ್.ಎನ್ ಸಂತೋಷ್ ಆಗಮಿಸುವರು
ದಿನಾಂಕ 8ರಂದು ನಾಡಿನ ಶಿಕ್ಷಣ ತಜ್ಞರುಗಳು ಗೋಷ್ಠಿಯಲ್ಲಿ ಭಾಗವಹಿಸಿ ಸಂವೇದನೆ ಹಾಗೂ ಪ್ರತ್ಯಕ್ಷಾನುಭವ ಕುರಿತು ಸಿರಿಗೇರಿ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿಯಾದ ಡಾ. ಹೆಚ್ ವಾಮದೇವಪ್ಪ, ಮತ್ತು ಸಂವೇಗಾತ್ಮಕ ಬುದ್ಧಿಶಕ್ತಿ ಕುರಿತು ಡಾ. ಫಣಿ ಬುರ್ಲಿ ಮಾತನಾಡುವರು.
ದಿನಾಂಕ 9ರಂದು ಜೀವನ ಕೌಶಲ್ಯ ಕುರಿತು ಎಂ ಎಸ್ ಹೊಟ್ಟಿನ್, ಹಾಗೂ ನೀಲ ನಕ್ಷೆ ಮತ್ತು ಪ್ರಶ್ನೆ ಕೋಶ ಕುರಿತು ನಿರೂಪಮ ನಾಯಕ, ಎಂ. ರಾಜಪ್ಪ ಮಾತನಾಡುವರು.
ಇಂದು ಕಾಲೇಜಿನ ಆಡಳಿತ ಅಧಿಕಾರಿಯಾದ ಶ್ರೀ ಎಚ್ಎನ್ ವೀರಭದ್ರಪ್ಪ ಅವರು ಈ ಸಮಾರಂಭಕ್ಕೆ ಆಗಮಿಸುವ ಗಣ್ಯರನ್ನು ಸ್ವಾಗತಿಸುವರು ಎಂದು
ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್ ಕೊಟ್ರೇಶ್ ಹಾಗೂ ರಾಜ್ಯ ಕಾರ್ಯದರ್ಶಿಯವರಾದ ಡಾ.ನಾಗರಾಜ ಮರೆಣ್ಣವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಣಭೀಷ್ಮ ಎಂದೇ ಹೆಸರಾದ ಮತ್ತು ಸಮ್ಮೇಳನದ ಗೌರವ ಅಧ್ಯಕ್ಷರಾದ ಬಿ ಭರತ್ ಭೂಷಣ್, ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್ ಕೊಟ್ರೇಶ್, ಇಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ವಾಗೀಶಯ್ಯ, ಹೆಚ್.ಎಂ ವೀರೇಶ್, ಬಿ.ಎಂ ಸಂತೋಷ್, ಸಿ.ಎಂ ಪ್ರವೀಣ್, ಶಂಭುಲಿಂಗ ಸ್ವಾಮಿ ಎಂ.ಪಿ.ಎಂ, ಮಂಜುನಾಥ ಮಾಳ್ಗಿ, ಸೇರಿದಂತೆ ಶಿಕ್ಷಣ ಶಾಸ್ತ್ರ ಉಪನ್ಯಾಸಕರು ಹಾಗೂ ಇಂದು ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.