


ಡೈಲಿ ವಾರ್ತೆ: 27/ಮಾರ್ಚ್ /2025


ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸ್ನೇಹ ಸಮ್ಮಿಲನ ಹಾಗೂ ಇಫ್ತಾರ್ ಕೂಟ

ಕುಂದಾಪುರ|ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ ಸ್ನೇಹ ಸಮ್ಮಿಲನ ಹಾಗೂ ಇಫ್ತಾರ್ ಕೂಟ ಕಾರ್ಯಕ್ರಮವು ಮಾ. 26 ರಂದು ಬುಧವಾರ ಕೋಟೇಶ್ವರದ ಬೀಜಾಡಿ ಯಲ್ಲಿರುವ ಸೀ ಬ್ರೇಜ್ ಬೀಚ್ ರೆಸಾರ್ಟ್ ನಲ್ಲಿ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಬೈಂದೂರು ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಗಂಗೊಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ
ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಇವರು ಮಾತನಾಡಿ ದೇಶದ ಸ್ಥಿತಿಗತಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಸ್ನೇಹ ಸಮ್ಮಿಲನ ಹಾಗೂ ಇಫ್ತಾರ್ ಕೂಟ ಕಾರ್ಯಕ್ರಮ ಆಯೋಜಿಸಿದ್ದು ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಸೌಹಾರ್ದದ ಸಂದೇಶ ನೀಡುತ್ತಿದೆ ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಸೆಯಲು ಈ ಇಫ್ತಾರ್ ಪ್ರೇರಣೆಯಾಗಲಿ ಎಂದರು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಬೈಂದೂರು ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಗಂಗೊಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಜಾಮಿಯಾ ಮಸೀದಿ ಕಂಡ್ಲೂರು ಇದರ ಖತಿಬ್ ಮೌಲನ ಇಲ್ಯಾಸ್ ನದ್ವಿ ದುವಾ ನೆರವೇರಿಸಿದರು.


ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಸಮಿತಿ ಸದಸ್ಯ ಶಾಹಿದ್ ಆಲಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಉಡುಪಿ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಕ್ ಓ.ಎಸ್. ಸುಲ್ತಾನ್ ಜುಮಾ ಮಸೀದಿ ಕೋಟೇಶ್ವರ ಇದರ ಖತಿಬ್ ಮೌಲನ ಪಜಿಲತ್ ಹುಸೇನ್, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಕಾರ್ಯದರ್ಶಿ ಶಂಸುದ್ದೀನ್, ಮೊದಲದವರು
ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಕ್ತಾರ್ ಕಂಡ್ಲೂರು ನಿರೂಪಿಸಿ, ವಂದಿಸಿದರು.
ಸ್ನೇಹ ಸಮ್ಮಿಲನ ಹಾಗೂ ಇಫ್ತಾರ್ ಕೂಟದಲ್ಲಿ ಜಿಲ್ಲೆಯ ನೂರಾರು ಮುಸ್ಲಿಮರು ಭಾಗವಹಿಸಿದರು.