ಡೈಲಿ ವಾರ್ತೆ : 14 ಮೇ 2022

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ *ಆಂಧ್ರ ಪ್ರದೇಶದ ವಿಶಾಖ ಪಟ್ಟಣದಲ್ಲಿ ದಿನಾಂಕ 15 ಮೇ 2022 ರಂದು ಸಂಜೆ 5 ಗಂಟೆಗೆ ಕಾವೇರಿ ಕನ್ನಡ ಸಂಘದ ಸಭಾ ಭವನದಲ್ಲಿ ವಿಶ್ವಮಾನವ ವಿಶ್ವ ಗುರು ಬಸವಣ್ಣ ನವರ ಜಯಂತಿ* ಯನ್ನು ಹಮ್ಮಿಕೊಳ್ಳಲಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಕಾವೇರಿ ಕನ್ನಡ ಸಂಘದ ಅಧ್ಯಕ್ಷರಾದ ಜಿ. ರಾಮ್ ಇವರು ವಹಿಸಿಕೊಳ್ಳುವರು. ಸಮಾರಂಭದ ಮುಖ್ಯ ಅತಿಥಿಯಾಗಿ, ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಖ್ಯಾತ ಪ್ರವಚನಾಕಾರದ ಪೂಜ್ಯಶ್ರೀ ವೇ. ಚನ್ನವೀರಸ್ವಾಮಿಗಳು ಹಿರೇಮಠ (ಕಡಣಿ) ಇವರು ಆಗಮಿಸಿ ಗುರು ಬಸವೇಶ್ವರರ ಕುರಿತು ಪ್ರವಚನ ನೀಡಲಿದ್ದಾರೆ.

ಕಾವೇರಿ ಕನ್ನಡ ಸಂಘದ ಸದಸ್ಯರಿಂದ ವಚನಗಾಯನ ಮತ್ತು ಬಸವ ತತ್ವ ಚಿಂತನ ಮಂಥನ ನಡೆಯಲಿದೆ. ಕಾವೇರಿ ಕನ್ನಡ ಸಂಘದ ಉಪಾಧ್ಯಕ್ಷರಾದ ಅನಂತ ಭಟ್, ಕಾರ್ಯದರ್ಶಿ: ಎಂ.ಸಾಮ್ ಮತ್ತು ಕೋಶಾಧಿಕಾರಿ: ಕುಮಾರಸ್ವಾಮಿ ಹಿರೇಮಠ ಉಪಸ್ಥಿತರಿರುವರು. ವಿಶಾಖಪಟ್ಟಣಂನಲ್ಲಿರುವ ಸಮಸ್ತ ಕನ್ನಡಿಗರು, ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಸಾಹಿತ್ಯ ಪರಂಪರೆಯಾಗಿ ವಚನ ಸಾಹಿತ್ಯ ನೀಡಿದ ಮತ್ತು ವಿಶ್ವದ ಮೊದಲ ಸಂಸತ್ತು ಸ್ಥಾಪಿಸಿ ಜನಕಲ್ಯಾಣದ ಗೀತೆ ಹಾಡಿದ, ಕ್ರಾಂತಿ ಪುರುಷ ಬಸವಣ್ಣನವರ ಜಯಂತ್ಯೋತ್ಸವದಲ್ಲಿ ಸಂಘದ ಸರ್ವ ಸದಸ್ಯರು ಮತ್ತು ಸಮಸ್ತ ಹೊರನಾಡ ಕನ್ನಡಿಗರು ಭಾಗವಹಿಸಿ ಬಸವ ಗುರು ಕೃಪೆಗೆ ಪಾತ್ರರಾಗ ಬೇಕೆಂದು ಎಂದು ಸಂಘಟಕ ಸಾಹಿತಿ ಕಾವೇರಿ ಕನ್ನಡ ಸಂಘದ ಕೋಶಾಧಿಕಾರಿ ಕುಮಾರಸ್ವಾಮಿ ಹಿರೇಮಠ (CISF) ಪ್ರಕಟಣೆ ಮೂಲಕ ತಿಳಿಸಿದ್ದಾರೆ.