ಡೈಲಿ ವಾರ್ತೆ : 30 ಮೇ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ಖಂಡಿಕಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ರಮ್ಯಾ ಕೆ. ಎಂ. ರವರನ್ನು ಶ್ರೀಮತಿ ವೈಶಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶಿಸ್ತು ಪ್ರಾಧಿಕಾರಿ ಜಿಲ್ಲಾಪಂಚಾಯತ್ ಶಿವಮೊಗ್ಗ ಆದೇಶ ಕಛೇರಿ ಪತ್ರ ಸಂಖ್ಯೆ ಜಿ. ಪಂ. ಶಿ /ಸಿಬ್ಬಂದಿ (3)/ಪಂ. ಅ. ಅ./ವಿ. ವ.06/06/2022-23 ದಿನಾಂಕ 24-05-2022 ರಂತೆ ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ, ಮೆಲ್ಮನವಿ ) ನಿಯಮಗಳು 1957 ರ ನಿಯಮ 10 (1) (ಡಿ ) ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಶ್ರೀಮತಿ ರಮ್ಯ ಕೆ. ಎಂ. ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಖಂಡಿಕಾ ಗ್ರಾಮ ಪಂಚಾಯಿತಿ ಸಾಗರ ತಾಲ್ಲೂಕು ಇವರನ್ನು ತಕ್ಷಣದಿಂದ ಅನ್ವಯವಾಗುವಂತೆ ಸೇವೆಯಿಂದ ಅಮಾನತ್ತಿನಲ್ಲಿಟ್ಟು ಆದ್ದೇಶಿಸಿದ್ದಾರೆ.

ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನವನ್ನು ಬಿಡ ತಕ್ಕದ್ದಲ್ಲ ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957 ರ ನಿಯಮ 98 ರ ಪ್ರಕಾರ ಜೀವನ ನಿರ್ವಹಣೆ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆಂದು ಆದೇಶದಲ್ಲಿ ಉಲ್ಲೆಖಿತವಾಗಿದೆ.


ಅಮಾನತ್ತಿಗೆ ಮುಖ್ಯ ಕಾರಣ:

ಶ್ರೀ ಶ್ರೀಕಾಂತ ನಾಯ್ಕ್ ಬಿನ್ ರಾಮಚಂದ್ರ ನಾಯ್ಕ, ಎಲ್. ಬಿ. ಕಾಲೇಜು ಹಿಂಭಾಗ ಕುಗ್ವೆ ಗ್ರಾಮ ಸಾಗರ ತಾ ಇವರು ದಿನಾಂಕ 21/04/2022 ರ ಮನವಿಯಲ್ಲಿ ಅವರ ಮಾಲೀಕತ್ವದ ಅಭಿವೃದ್ಧಿ ಪಡಿಸುತ್ತಿರುವ ಬಡಾವಣೆಯ ಬಗ್ಗೆ ನ್ಯಾಯದಲ್ಲಿರುವ ದಾವೆಗಳನ್ನೂ ಪರಿಶೀಲಿಸಿದ ನಂತರ ತಾಲ್ಲೂಕು ಪಂಚಾಯಿತಿ ಕಾನೂನು ಸಲಹೆಗಾರ ಸ್ಪಷ್ಟ ಅಭಿಪ್ರಾಯದಂತೆ ಶೇ 60 ರಷ್ಟು ನಿವೇಶನ ಬಿಡುಗಡೆಗೊಳಿಸುವ ಸಂಭಂದ ಕಾರ್ಯನಿರ್ವಾಹಕ ಅಧಿಕಾರಿಗಳು ದಿ.03/02/2022 ರಂದು ದೂರುದಾರರು ಅಭಿವೃದ್ಧಿ ಮಾಡುತ್ತಿರುವ ಬಡಾವಣೆಯಲ್ಲಿ ಶೇ.60 ನಿವೇಶನ ಬಿಡುಗಡೆಗೊಳಿಸುವಂತೆ ಸ್ಪಷ್ಟವಾಗಿ ಖಂಡಿಕಾ ಗ್ರಾಮ ಪಂಚಾಯಿತಿ PDO ರವರಿಗೆ ಸೂಚಿಸಿದ್ದೂ, ಅದರಂತೆ PDO ಶೇ.60 ನಿವೇಶನ ಬಿಡುಗಡೆ ಮಾಡಲು ದಿ.14/02/2022ರಂದು ಅನುಭಂದ – 1 ರಂತೆ ನೋಟರಿಕೃತ ಪ್ರಮಾಣ ಪತ್ರ ಮಾಡಿಸಿಕೊಡುವಂತೆ ನಕಲನ್ನು ನೀಡಿ ದಿ.16/02/2022 ರಂದು 580000-00 ಹಣವನ್ನು ಗ್ರಾಮ ಪಂಚಾಯಿತಿ ಖಾತೆಗೆ ಜಮಾ ಮಾಡಿಸಿಕೊಂಡು ರಶೀದಿಯನ್ನೂ ನೀಡಿರುತ್ತಾರೆ. ನಂತರ ಅನೂರ್ಜಿತಗೊಂಡ ಕರಾರು ಪತ್ರದಲ್ಲಿರುವಂತೆ ಶೇ.61 ಮಾಲೀಕರ ಶೇರ್ ಹಾಗೂ ಶೇ.39 ರ ಡೆವಲಪರ್ ಶೇರ್ ಯಾವುದೆಂದು ಗೊಂದಲ ಸೃಷ್ಟಿ ಮೂಲಕ ಪುನಃ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಪಷ್ಟಪಡಿಸಿಕೊಡುವಂತೆ ದಿ.23/03/2022 ರಂದು ಕೇಳಿ ಪತ್ರ ಬರೆದು ಕಾಲಹರಣ ತಂತ್ರ ಮಾಡಿದ್ದಾರೆ. ಅನೂರ್ಜಿತಗೊಂಡ ಡೆವಲಪರ್ಸ್ರೊಂದಿಗೆ ಶಾಮೀಲಾಗಿ ಚೀತಾವಣೆ ಮಾಡಿ ಹೈಕೋರ್ಟ್ ನಲ್ಲಿ ಸರಕಾರದ ವಿರುದ್ಧ ರಿಟ್ ಅರ್ಜಿ ಹಾಕಿಸಿ ಈಗ ಪಂಚಾಯಿತಿ ಖಾತೆಗೆ ರೂ. 5.80 ಲಕ್ಷ ಜಮಾ ಮಾಡಿಸಿಕೊಂಡು ಅವಿಧ್ಯಾವಂತ ಮತ್ತು ಅನುಭವಿವಿರದ ಸದಸ್ಯರುಗಳಿಗೆ ತಪ್ಪು ಮಾಹಿತಿ / ಸಂದೇಶ ನೀಡುತ್ತಾ ಶೇ.60 ನಿವೇಶನ ಬಿಡುಗಡೆ ಮಾಡದೇ ಸತಾಯಿಸಿ ಜಮೀನಿನ ಮಾಲೀಕನಾಗಿದ್ದರೂ ಸಹ ಅಸಹಾಯಕ ರೈತನಾದ ದೂರುದಾರ ಹಾಗೂ ದೂರುದಾರನ ಕುಟುಂಬವನ್ನೂ ಆತ್ಮಹತ್ಯೆಗೆ ಪ್ರೇರೆಪಿಸುತ್ತಿದ್ದಾರೆ. ಆದರಿಂದ ಖಂಡಿಕಾ ಗ್ರಾಮ ಪಂಚಾಯಿತಿ ಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರುಗಳು ನನಗೆ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟಕ್ಕೆ ಹೊಣೆಗಾರಾಗಿರುತ್ತಾರೆ ಅವರುಗಳಿಂದ ಆದ ನಷ್ಟವನ್ನೂ ಕೊಡಿಸಲು ಶೇ.60 ನಿವೇಶನ ಬಿಡುಗಡೆಗೊಳಿಸಲು ಹಾಗೂ ಪಿ ಡಿ ಓ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ದೂರುದಾರರು.

ಸದರಿ ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡಲು ಮುಖ್ಯ ಲೆಕ್ಕಾಧಿಕಾರಿಗಳು ಜಿಲ್ಲಾಪಂಚಾಯತ್ ಶಿವಮೊಗ್ಗ ರವರಿಗೆ ಸೂಚಿಸಲಾಗಿತ್ತು. ಮುಖ್ಯ ಲೆಕ್ಕಧಿಕಾರಿ ಜಿಲ್ಲಾಪಂಚಾಯತ್ ಶಿವಮೊಗ್ಗ ರವರ ಉಲ್ಲೇಖದಂತೆ ಪರಿಶೀಲನಾ ವರದಿ ಸಲ್ಲಿಸಿದಂತೆ ದೂರುದಾರರ ಆರೋಪಗಳು ಸತ್ಯವಾಗಿರುವುದನ್ನು ಅರಿತು ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಹಾಗೂ ಸಕ್ಷಮ ಶಿಸ್ತು ಪ್ರಾಧಿಕಾರಿಗಳಾದ ಶ್ರೀಮತಿ ವೈಶಾಲಿ ಶ್ರೀಮತಿ ರಮ್ಯ ಕೆ. ಎಂ. ಖಂಡಿಕಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅಮಾನತ್ತು ಆದೇಶ ಜಾರಿಯಾಗಿದೆ.


ಅಮಾನತ್ತು ಆದೇಶ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀ ಶ್ರೀಕಾಂತ್ ನಾಯ್ಕ್ ರವರು ” ನ್ಯಾಯಕ್ಕೆ ಸಿಕ್ಕ ಜಯ ” ಎಂದು ಪ್ರತಿಕ್ರಿಯೆ ನೀಡಿದರು.