ಡೈಲಿ ವಾರ್ತೆ : 01 ಆಗಸ್ಟ್ 2022

ಕೋಟ : ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟ ಮೂರುಕೈ ಸಮೀಪ ನಡೆದಿದೆ.

ಠಾಣಾ ಉಪನಿರೀಕ್ಷಕ ಮಧು ಬಿ.ಇ. ಅವರು ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಸಾಲಿಗ್ರಾಮ ಕಡೆಯಿಂದ ಕೋಟ ಕಡೆಗೆ ಸಿಲ್ವರ್ ಬಣ್ಣದ ಸ್ಕೂಟಿಯಲ್ಲಿ ಮೂವರು ಅಪ್ರಾಪ್ತ ವಯಸ್ಕರಂತೆ ಕಾಣುವ ಯುವಕರು ತ್ರಿಬಲ್ ರೈಡ್‌ನಲ್ಲಿ ಬಂದಿದ್ದು, ಸವಾರ ಹೆಲ್ಮೆಟ್ ಕೂಡ ಧರಿಸದೇ ಅತೀ ವೇಗವಾಗಿ ಬರುತ್ತಿರುವುದನ್ನು ಕಂಡು ವಾಹನ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಸವಾರ ಸ್ಕೂಟಿ ನಿಲ್ಲಿಸದೆ ವೇಗವಾಗಿ ಬಂದು ವಾಹನ ತಪಾಸಣೆ ಮಾಡುತ್ತಿದ್ದವರ ಮೈಮೇಲೆ ಬಂದಂತೆ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನ ನಿಲ್ಲಿಸದೆ ಹೋಗಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದೆ.