ಡೈಲಿ ವಾರ್ತೆ : 01 ಸೆಪ್ಟೆಂಬರ್ 2022

ಅಂಕೋಲಾ: ಪುರಸಭೆ ಸರ್ವಾಧಿಕಾರಿ ಇಂಜಿನಿಯರ್ ಭಾಸ್ಕರ್ ಗೌಡ ವಿರುದ್ದ ಗುತ್ತಿಗೆದಾರ ಸಂಜೀವ ನಾಯ್ಕರಿಂದ ಪುರಸಭೆ ವರಾಂಡದಲ್ಲಿ ಪ್ರತಿಭಟನೆ..!

ಅಂಕೋಲಾ : ಗುತ್ತೆಗೆದಾರ ಸಂಜೀವ ನಾಯ್ಕ ಪುರಸಭೆ ಇಂಜಿನೀಯರ ಭಾಸ್ಕರ ಗೌಡರ ಭಾವ ಚಿತ್ರದೊಂದಿಗೆ ಡಾ.ಅಂಬೇಡ್ಕರ ಮತ್ತು ಗಾಂಧೀಜಿ ಭಾವಚಿತ್ರದ ಪೋಟೋ ಇಟ್ಟುಕೊಂಡು ಪುರಸಭೆಯ ವರಾಂಡದಲ್ಲಿ ಪ್ರತಿಭಟನೆಗೆ ಸಜ್ಜಾದರು. ತಕ್ಷಣ ಮುಖ್ಯಾಧಿಕಾರಿ
ಎನ್.ಎಂ.ಮೇಸ್ತಾ ಅವರು ನಿಮ್ಮ ಹಣವನ್ನು ನಾನು ಸಂದಾಯ ಮಾಡಿಸುತ್ತೇನೆ ಎಂದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲವಕಾಶ ಪಡೆದು ಪ್ರತಿಭಟನೆ ಹಿಂಪಡೆದ ಘಟನೆ ಗುರುವಾರ ನಡೆದಿದೆ.

ಪಟ್ಟಣದ ವಿ.ಟಿ.ರಸ್ತೆಯ ಸಂಜೀವ ಪಿ.ನಾಯ್ಕ ಅಂಬಾರಕೊಡ್ಲ ವಾರ್ಡ್‍ನಲ್ಲಿ ಒಂದೇ ಪ್ಯಾಕೇಜ್‍ನಲ್ಲಿ 4 ಲಕ್ಷ 20 ಸಾವಿರ ವೆಚ್ಚದಲ್ಲಿ ಎರಡು ಬಾವಿಗಳನ್ನು ನಿರ್ಮಿಸಲು ಕಾಮಗಾರಿ ಪಡೆದಿರುತ್ತಾನೆ. ಒಂದು ಭಾವಿ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಭಾವಿಯ ಕೆಳಭಾಗದಲ್ಲಿ ಕಪ್ಪು ಚಿರೇಕಲ್ಲು ಕಾಣಿಸಿ ಕೊಳ್ಳವ ಜತೆ ಅದೇ ಹಂತದಲ್ಲಿ ನೀರು ಸಹ ಬಂದಿದ್ದು, 20
ಅಡಿ ಪೋಟಕ್ಕೆ ಕಾಮಗಾರಿ ಸ್ಥಗಿತವಾಗಿದೆ.

ನಾನು ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡು ಕಾಮಗಾರಿ ಮಾಡಿದ್ದೇನೆ. ಇಂಜಿನೀಯರ ಭಾಸ್ಕರ ಗೌಡ ಇವರು ಭಾಗಶಃ ಹಣ ಸಹ ಸಂದಾಯ ಮಾಡಿಲ್ಲಾ. ನಾನು ಹಲವಾರು ಬಾರಿ ವಿನಂತಿಸಿಕೊಂಡಿದ್ದರು. ಹಣ ಬಿಡುಗಡೆ ಮಾಡಲು
ನಿರಾಕರಿಸಿದ್ದಾನೆ. ಈ ಕುರಿತು ಜಿಲ್ಲಾಧಿಕಾರಿ ಬಳಿ ಲಿಖಿತ ದೂರು ಸಹ ನೀಡಿದ್ದೇನೆ. ಯಾವುದೇ ಪ್ರಯೋಜನೆ ಆಗಿಲ್ಲವಾದ ಕಾರಣ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದು ಪತ್ರಕರ್ತರೊಂದಿಗೆ ತನಗೆ ಅನ್ಯಾಯವಾದ ಕುರಿತು ಸಂಜೀವ ನಾಯ್ಕ ಅಳಲುತೊಂಡಿಕೊಂಡಿದ್ದಾನೆ.

ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಪುರಸಭೆ ಅಧ್ಯಕ್ಷೆ ಶಾಂತಲಾ
ನಾಡಕರ್ಣಿ ಅವರಿಗೆ ಆ.30, 2022 ರಂದು ಮನವಿ ಸಲ್ಲಿಕೆಯಾಗಿದೆ. ತಕ್ಷಣ ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಮೇಸ್ತಾ ಅವರು ಕಾಮಗಾರಿ ಕಡತಗಳನ್ನು ಪರಿಶೀಲಿಸಿ ಗುತ್ತೆಗೆದಾರ ಸಂಜೀವ ನಾಯ್ಕರಿಗೆ 2,78,209
ರೂ. ಭಾಗಶಃ ಹಣವನ್ನು ನೀಡಲು ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕ ಇನ್ನುಳಿದ ಹಣವನ್ನು ಸಂದಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.


ಭಾಸ್ಕರ ಗೌಡ ಪುರಸಭೆ
ಇಂಜಿನೀಯರ

ಪುರಸಭೆ ಇಂಜಿನಿಯರ್ ಭಾಸ್ಕರ ಗೌಡ :
ಸಂಜೀವ ನಾಯ್ಕ ಅವರು ಕಾಮಗಾರಿಯನ್ನು ಪೂರ್ಣಗೊಳಿಸದೇ ಹಣ ಬಿಡುಗಡೆ ಮಾಡಬಾರದೆಂದು ಅಂಬಾರಕೊಡ್ಲ ವಾರ್ಡ್ ಸದಸ್ಯ ಪ್ರಕಾಶ ಗೌಡ ಮತ್ತು ಸ್ಥಳೀಯರು ತಕರಾರು ಮಾಡಿದ್ದಾರೆ. ಅಲ್ಲದೇ ಅಂದಿನ
ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕವಾಡ ಅವರು 02.08.2021 ರಂದು ಕಾಮಗಾರಿ ಪೂರ್ಣವಾಗದಂತೆ ಹಣ ಬಿಡುಗಡೆ ಮಾಡಬಾರದು ಎಂದು ಆದೇಶ ಮಾಡಿದ ಹಿನ್ನೆಲೆಯಲ್ಲಿ ಅದು ಅಲ್ಲಿಗೆ ಸ್ಥಗಿತಗೊಂಡಿತ್ತು.
– ಭಾಸ್ಕರ ಗೌಡ ಕಿರಿಯ ಇಂಜಿನೀಯರ ಪುರಸಭೆ ಅಂಕೋಲಾ