ಡೈಲಿ ವಾರ್ತೆ : 16 ಸೆಪ್ಟೆಂಬರ್ 2022

ಶಾರ್ಜಾ : 13 ನೇ ಮಹಡಿಯ ಕಿಟಕಿಯಲಿ ನೇತಾಡುತ್ತಿದ್ದ ಬಾಲಕನ ರಕ್ಷಣೆ: ಬಾಲಕನನ್ನು ರಕ್ಷಿಸಿದವರಿಗೆ ಶಾರ್ಜಾ ಪೊಲೀಸರಿಂದ ಗೌರವ!

ಶಾರ್ಜಾ: ಶಾರ್ಜಾದ ಬಹು ಮಹಡಿ ಕಟ್ಟಡದ 13 ನೇ ಮಹಡಿಯಲ್ಲಿ ಕಿಟಕಿಯಲ್ಲಿ ನೇತಾಡುತ್ತಿದ್ದ ಐದು ವರ್ಷದ ಬಾಲಕನನ್ನು ರಕ್ಷಿಸಲು ಸಹಾಯ ಮಾಡಿದ ಕಟ್ಟಡದ ವಾಚ್‌ಮ್ಯಾನ್ ಮತ್ತು ನಿವಾಸಿಯನ್ನು ಶಾರ್ಜಾ ಪೊಲೀಸರು ಗೌರವಿಸಿದರು.

ಶಾರ್ಜಾ ಪೊಲೀಸ್ ಮುಖ್ಯಸ್ಥರು ಮತ್ತು ಇತರ ಉನ್ನತ ಅಧಿಕಾರಿಗಳು ಎಮಿರೇಟ್‌ನಲ್ಲಿ ವಸತಿ ಕಟ್ಟಡದ ಕಾವಲುಗಾರನಾಗಿ ಕೆಲಸ ಮಾಡುವ ನೇಪಾಳ ಮೂಲದ ಮುಹಮ್ಮದ್ ರಹ್ಮತುಲ್ಲಾ ಮತ್ತು ಅದೇ ಕಟ್ಟಡದಲ್ಲಿ ವಾಸಿಸುವ ಆದಿಲ್ ಅಬ್ದುಲ್ ಹಫೀಜ್ ಅವರನ್ನು ಸನ್ಮಾನಿಸಿದರು.

ಶಾರ್ಜಾದ ಅಲ್ ತಾವೂನ್ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ. ಫ್ಲಾಟ್‌ನಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಕಿಟಕಿಯಿಂದ ಹೊರ ಜಿಗಿದಿದ್ದು, ರಸ್ತೆಯಲ್ಲಿ ನಿಂತಿದ್ದ ಅಕ್ಕಪಕ್ಕದ ಕೆಲವರು ಕಿಟಕಿಯಲ್ಲಿ ಮಗು ನೇತಾಡುತ್ತಿರುವುದನ್ನು ಕಂಡಿದ್ದಾರೆ. ಗಾಬರಿಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ರಕ್ಷಿಸಲು ಯತ್ನಿಸಿದ್ದಾಗಿ ಅದೇ ಕಟ್ಟಡದ ನಿವಾಸಿ ಆದಿಲ್ ಅಬ್ದುಲ್ ಹಫೀಜ್ ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು.

ಅಪಾಯದ ಅರಿವಾದ ಕೂಡಲೇ ವಾಚ್‌ಮನ್‌ಗೆ ಮಾಹಿತಿ ನೀಡಿ ಅವರ ಜೊತೆಗೆ ಕಟ್ಟಡದ 13ನೇ ಮಹಡಿಗೆ ಧಾವಿಸಿದ್ದಾರೆ. ಫ್ಲಾಟ್‌ನ ಬಾಗಿಲು ತಟ್ಟಿದರು ಆದರೆ ಯಾರೂ ಬಾಗಿಲು ತೆರೆಯಲಿಲ್ಲ ಇದೇ ವೇಳೆ ಮಗುವಿನ ತಂದೆಗೆ ದೂರವಾಣೆ ಕರೆ ಮಾಡಿ ಬಾಗಿಲು ಒಡೆದು ಮಗುವನ್ನು
ರಕ್ಷಿಸಬೇಕೆಂದು ತಿಳಿಸಿದರು.
ಇಬ್ಬರು ಬಾಗಿಲು ಮುರಿದು ಒಳ ಪ್ರವೇಶಿಸಿ ಕಿಟಕಿಯ ಒಂದು ಬದಿಯಲ್ಲಿ ನೇತಾಡುತ್ತಿದ್ದ ಮಗುವಿನ ಕೈ ಹಿಡಿದುಕೊಂಡು ಮೇಲೆತ್ತಿದ್ದಾರೆ.

ಮಗು ಕಾಲಿನ ಹೆಬ್ಬೆರಳನ್ನು ಮಾತ್ರ ನೆಲಕ್ಕೆ ತಾಗಿಸಿ ಕಷ್ಟಪಟ್ಟು ನಿಂತಿದೆ ಎಂದರು.

ಮಗುವನ್ನು ರಕ್ಷಿಸಿದ ಕೆಲವೇ ಸೆಕೆಂಡುಗಳಲ್ಲಿ, ಆರು ಪೊಲೀಸ್ ಗಸ್ತು ತಂಡಗಳು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪಿದವು. ಅದೇ ವೇಳೆ ಮಗುವಿನ ತಾಯಿ ಕೂಡ ಆಗಮಿಸಿದರು. ಬಳಿಕ ಮಗುವನ್ನು ರಕ್ಷಿಸಿದವರು ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಮಗು ಕೆಳಗೆ ಬೀಳಬಹುದೆಂಬ ಭಯದಿಂದ ಅಕ್ಕಪಕ್ಕದ ಮನೆಯವರಿಗೆ ಕಂಬಳಿ ಮತ್ತು ಹಾಸಿಗೆಗಳನ್ನು ನೆಲಕ್ಕೆ ಹರಡುವಂತೆ ಹಾಕಲಾಗಿದೆ ಎಂದು ಕಟ್ಟಡದ ಕಾವಲುಗಾರ ಹೇಳಿದರು.

ಬಹುಮಹಡಿ ಕಟ್ಟಡದ ಕಿಟಕಿಯಲ್ಲಿ ಮಗು ಸಿಲುಕಿಕೊಂಡಿದೆ ಎಂಬ ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು, ಆದರೆ ಅವರು ಅಲ್ಲಿಗೆ ಬರುವಷ್ಟರಲ್ಲಿ ಮಗುವನ್ನು ರಕ್ಷಿಸಲಾಗಿತ್ತು ಎಂದು ಶಾರ್ಜಾ ಸಿವಿಲ್ ಡಿಫೆನ್ಸ್ ಮಾಹಿತಿ ನೀಡಿದ್ದಾರೆ.