ವರದಿ : ಜಿವೋತ್ತಮ್ ಪೈ ಭಟ್ಕಳ


ಭಟ್ಕಳ: 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ತಾಲೂಕಿನ ಕಡವಿನಕಟ್ಟಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆನೂತನ ಮಹಾದ್ವಾರವನ್ನು ಶಾಸಕ ಸುನೀಲ ನಾಯ್ಕ, ಶುಕ್ರವಾರ ದಂದು ಲೋಕಾರ್ಪಣೆಗೈದರು.ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ದೇವಿ ಮನಸ್ಸಿನಲ್ಲಿನ ಸಂಕಲ್ಪಿಸಿದ ಕೆಲಸ ನಡೆಸಿಕೊಡುತ್ತಾಳೆ. ನಮ್ಮಲ್ಲಿನ ದೇವರ ಸಂಖ್ಯೆಯಂತೆ ಭಕ್ತಿ ಶ್ರದ್ಧೆಯೂ ಹೆಚ್ಚಾಗಬೇಕು, ಆಗ ಮಾತ್ರ ಸನಾತನ ಧರ್ಮದ ಉದ್ದೇಶ ಫಲಪ್ರದವಾಗಲಿದೆ. ದೇವಿಯ ಭಕ್ತನಾಗಿ ಈ ಅಪರೂಪದ ಕ್ಷಣದಲ್ಲಿ ಪಾಲ್ಗೊಳುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೇ ಸರಿ ಕಡವಿನಕಟ್ಟೆ ದೇವಸ್ಥಾನದ ಅಭಿವೃದ್ಧಿಗೆ ಸರಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವಲ್ಲಿ ನನ್ನ ಪ್ರಯತ್ನ ಸದಾ ಇರಲಿದೆ ಎಂದರು.


ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ವಾಸ್ತುಶಿಲ್ಪಿ ವಾಸುದೇವ ಶೇಟ್, ದ್ವಾರ ರಚನೆಯ ಎಂಜಿನಿಯರ್‌ ರವಿ ವಿ.ಎಮ್. ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಭಟ್ ಅವರನ್ನು ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಆಡಳಿತ ಮಂಡಳಿಯ ಉಪಾಧ್ಯಕ್ಷ ಅಶೋಕ ಕಾಮತ ಸ್ವಾಗತಿಸಿ ವಂದಿಸಿದರು. ಗಂಗಾಧರ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ವಿಜಯಪುರ ಕಿವಿಜಿ ಬ್ಯಾಂಕ್ ವ್ಯವಸ್ಥಾಪಕ ವಿಜಯಕುಮಾರ ಕನ್ನಡಿ, ಜಾಲಿ ಪಟ್ಟಣ ಪಂಚಾಯತ ನ ಸದಸ್ಯರು ಸೇರಿದಂತೆ ಅನೇಕರು ಇದ್ದರು.