ವರದಿ-ಕುಮಾರ್ ನಾಯ್ಕ.ಉಪಸಂಪಾದಕರು



ನವದೆಹಲಿ: ಲಂಚ ಪ್ರಕರಣದಲ್ಲಿ ಗೇಲ್‌ನ ಮಾರ್ಕೆಟಿಂಗ್ ನಿರ್ದೇಶಕ ಇ.ಎಸ್.ರಂಗನಾಥನ್ ಅವರನ್ನು ಕೇಂದ್ರೀಯ ತನಿಖಾ ದಳ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಂಗನಾಥನ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ 1.3 ಕೋಟಿ ರೂ.ನ್ನು ವಶಪಡಿಸಿಕೊಂಡಿತ್ತು. ದೆಹಲಿಯಲ್ಲಿರುವ ರಂಗನಾಥನ್ ನಿವಾಸ ಕಚೇರಿ ಮತ್ತು ನೋಯ್ಡಾದಲ್ಲಿರುವ ನಿವಾಸವನ್ನು ಸಿಬಿಐ ಶೋಧಿಸಿದೆ.

ಕೇಂದ್ರ ತನಿಖಾ ಸಂಸ್ಥೆಯು ಗೇಲ್‌ನ ಮಾರ್ಕೆಟಿಂಗ್ ನಿರ್ದೇಶಕ ಇ.ಎ.ಸ್.ರಂಗನಾಥನ್ ಮತ್ತು ಇತರ ಹಲವಾರು ಉದ್ಯಮಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಪಿಎಸ್‌ ಯು ಮಾರಾಟ ಮಾಡುವ ಪೆಟ್ರೋ-ಕೆಮಿಕಲ್ ಉತ್ಪನ್ನಗಳನ್ನು ಖರೀದಿಸುವ ಖಾಸಗಿ ಕಂಪೆನಿಗಳಿಂದ 50 ಲಕ್ಷಕ್ಕೂ ಹೆಚ್ಚು ಲಂಚ ಪಡೆದ ಆರೋಪದಲ್ಲಿ ಪ್ರಕರಣ ದಾಖಲಿಸಿದೆ.


ಖಾಸಗಿ ಕಂಪೆನಿಯೊಂದರ ಪ್ರತಿನಿಧಿಗಳ ನಿರ್ದೇಶನದ ಮೇರೆಗೆ ಮಧ್ಯವರ್ತಿ ರಂಗನಾಥನ್‌ಗೆ ಪೆಟ್ರೋ ಕೆಮಿಕಲ್‌ನಲ್ಲಿ ಖರೀದಿದಾರರಿಗೆ ಸ್ವಲ್ಪ ರಿಯಾಯಿತಿ ನೀಡುವಂತೆ ಮನವಿ ಮಾಡಿದರು ಎಂದು ಕೇಂದ್ರ ಸಂಸ್ಥೆ ತಿಳಿಸಿದೆ.