ಡೈಲಿ ವಾರ್ತೆ: 09 ನವಂಬರ್ 2022

ಕಾರ್ಕಳ: ಮೆಸ್ಕಾಂ ಉದ್ಯೋಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


ಕಾರ್ಕಳ : ತಾಲೂಕಿನ ಕಲ್ಯಾ ಗ್ರಾಮದಲ್ಲಿ ಹಾಡಿಯಲ್ಲಿ ನಿಟ್ಟೆಯ ಮಹಿಳಾ ಮೆಸ್ಕಾಂ ಉದ್ಯೋಗಿಯೊಬ್ಬರು ನೇಣು ಬಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಲ್ಯಾ ಗ್ರಾಮದ ನಿಶಾ (23) ಆತ್ಮಹತ್ಯೆ ಮಾಡಿಕೊಂಡವರು.

ನಿಶಾ ಅವರು ನಿಟ್ಟೆಯ ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದರು. ಇವರ ಸಹೋದರ ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನಿಶಾರವರ ತಾಯಿ ಶಕುಂತಲಾರವರು ಮಾನಸಿಕವಾಗಿ ನೊಂದಿದ್ದರು. ಇದರಿಂದ ನಿಶಾ ಕೂಡ ಮಾನಸಿಕವಾಗಿ ನೊಂದು, ಇಲ್ಲವೇ ಬೇರೆ ಇನ್ನಾವುದೋ ಕಾರಣದಿಂದ ಮನನೊಂದು ನ.8 ರಂದು ಮಧ್ಯಾಹ್ನ ತನ್ನ ಮನೆಯ ಪಕ್ಕದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಮೃತರ ತಂದೆ ರವಿ ಪೂಜಾರಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.