ಡೈಲಿ ವಾರ್ತೆ: 30 ನವಂಬರ್ 2022

ಮುಸ್ಲಿಂ ಹೆಣ್ಣುಮಕ್ಕಳಿಗೆ 10 ಕಾಲೇಜು‌ ನಿರ್ಮಾಣಕ್ಕೆ ಬಿಡುವುದಿಲ್ಲ:ಪ್ರಮೋದ್ ಮುತಾಲಿಕ್

ಬೆಂಗಳೂರು: ಕರ್ನಾಟದಲ್ಲಿ ವಕ್ಪ್ ಬೋರ್ಡ್ ವತಿಯಿಂದ ಮುಸ್ಲಿಂ ಹೆಣ್ಣುಮಕ್ಕಳಿಗೆ 10 ಸರಕಾರಿ ಕಾಲೇಜು‌ ನಿರ್ಮಾಣಕ್ಕೆ ಸರಕಾರ ಅನುಮೋದನೆ ನೋಡಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿ ಮುತಾಲಿಕ್ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ‌.

ಕರ್ನಾಟಕದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗ ಕಾಲೇಜು ಸ್ಥಾಪನೆಗೆ ಬಿಡುವುದಿಲ್ಲ,10 ಮುಸ್ಲಿಂ ಕಾಲೇಜು ಸ್ಥಾಪನೆಗೆ ಸರಕಾರ ಅನುಮೋದನೆ ಕೊಟ್ಟಿದೆ ಎಂದು ತಿಳಿದು ಬಂದಿದೆ.ಇದಕ್ಕೆ ಶ್ರೀರಾಮ‌ಸೇನೆ ರಾಜ್ಯದಲ್ಲಿ ತೀವ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ಕೊಡುತ್ತೇನೆ ಎಂದು‌ ಮುತಾಲಿಕ್ ಹೇಳಿದ್ದಾರೆ.

ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈ ಬಾರಿ ಕಾರ್ಕಳದಿಂದ ಚುನಾವಣೆ ನಿಲ್ಲುವ ಫ್ಲಾನ್ ನಲ್ಲಿ ಇದ್ದಾರೆ‌. ಅದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಸಾರ್ವಜನಿಕವಾಗಿ ಹೆಚ್ಚು ಹೇಳಿಕೆ ಕೊಟ್ಟು ಪ್ರಚಾರ ಮಾಡಿದ್ದರು.ಇದೀಗ ವಕ್ಪ್ ಆಸ್ತಿಯಿಂದ ಕಾಲೇಜು ಕಟ್ಟುವುದಕ್ಕೆ ವಿರೋಧಿಸಿ ಮತ್ತೆ ಪ್ರಚಾರದಲ್ಲಿದ್ದಾರೆ.

ಕಲಬುರಗಿ, ಯಾದಗರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ 10 ಸರ್ಕಾರಿ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿರುವ ಬಗ್ಗೆ ಮಾಹಿತಿ ಇತ್ತು. ಇದಕ್ಕ ವಕ್ಪ್ ನಿಂದ 2.5 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ಕೂಡ ವರದಿ ತಿಳಿಸಿತ್ತು.

ರಾಜ್ಯದಲ್ಲಿ ಹಿಜಾಬ್ ಸಮಸ್ಯೆ ಬಳಿಕ ಸಾವಿರಾರು ಹೆಣ್ಣು ಮಕ್ಕಳು ಶಾಲೆ, ಕಾಲೇಜು ತೊರೆದಿದ್ದರು,ಇದಕ್ಕೆ ಪ್ರತ್ಯೇಕ ಕಾಲೇಜು‌ ನಿರ್ಮಿಸುವುದಾಗಿ ವಕ್ಪ್ ಬೋರ್ಡ್ ಮೊದಲೇ ಹೇಳಿತ್ತು.