ಡೈಲಿ ವಾರ್ತೆ: 20 ಡಿಸೆಂಬರ್ 2022

ವಿಶ್ವದಲ್ಲೇ ಪ್ರಥಮ ಪ್ರಯೋಗ:
ದುಬೈ ಹೋಟೆಲ್ ನಲ್ಲಿ ಕೆಲಸಕ್ಕಿಲ್ಲ ಮಾನವ, ಸರ್ವವು ಸೂಪರ್ ಮಾಡೆಲ್ ರೋಬೊಗಳು…!

ದುಬೈ; ದುಬೈನ ಕೆಫೆವೊಂದರಲ್ಲಿ ಸೂಪರ್‌ ಮಾಡೆಲ್‌ ರೋಬೊಗಳು ಹೋಟೆಲ್‌ಗಳಲ್ಲಿ ಸರ್ವ್‌ ಮಾಡಲಿದೆ‌.

ವಿಶ್ವದಲ್ಲೇ ಮೊದಲ ಬಾರಿಗೆ ದುಬೈನ ದೊನ್ನ ಸೈಬರ್‌ ಕೆಫೆ ಎಂಬ ಕೆಫೆಯಲ್ಲಿ 2023ರಿಂದ ಸಂಪೂರ್ಣವಾಗಿ ಸೂಪರ್‌ಮಾಡೆಲ್‌ ರೋಬೊಗಳೇ ಜನರಿಗೆ ಸೇವೆ ಒದಗಿಸಲಿವೆ ಎಂದು ತಿಳಿದಿ ಬಂದಿದೆ.

ಗ್ರಾಹಕರಿಗೆ ಈ ಕೆಫೆಯಲ್ಲಿ ಸರ್ವ್ ಮಾಡಲು ಒಬ್ಬರೇ ಒಬ್ಬರು ವ್ಯಕ್ತಿಗಳು ಇರುವುದಿಲ್ಲ.ಎಲ್ಲಾ ಜನರಿಗೂ ಸೂಪರ್‌ ಮಾಡೆಲ್‌ ರೋಬೊಗಳೇ ಸರ್ವ್‌ ಮಾಡಲಿವೆ ಎಂದು ತಿಳಿದು ಬಂದಿದೆ.

ಈ ಸೂಪರ್‌ ಮಾಡೆಲ್‌ ರೋಬೊಗಳು ಗ್ರಾಹಕರ ಜಿತೆ ಸಂವಹನ‌ ನಡೆಸುತ್ತದೆ.ಜನರ ಭಾವನೆಗಳಿಗೆ ಸ್ಪಂದಿಸುತ್ತದೆ.ಜನರಿಗೆ ಏನು ಬೇಕೋ ಅದನ್ನು ತಲುಪಿಸುವ ಕೆಲಸ ಮಾಡುತ್ತದೆ.

ದಿನದ 24 ಗಂಟೆಯೂ ಕೆಫೆ ತೆರೆದಿರಲಿದ್ದು,ದುಬೈನ ಈ‌ ಕೆಫೆಗೆ ತೆರಳಲು ಜನರು ಹುಮ್ಮಸ್ಸಿನಿಂದ ಕಾಯುತ್ತಿದ್ದಾರೆ.

ಕೆಫೆಯಲ್ಲಿ ಸೂಪರ್ ಮಾಡೆಲ್ ರೋಬೋಟ್ ಜೊತೆಗೆ, ಹಲವಾರು ಸ್ವಯಂ-ಕಾರ್ಯ ನಿರ್ವಹಿಸುವ ಐಸ್ ಕ್ರೀಮ್ ಯಂತ್ರಗಳು‌ ಇವೆ.‌ ಇದಲ್ಲದೆ ರೋಬೋಟ್ ಕೈಗಳಿಂದಲೇ ತಯಾರಿಸಿದ ಕಾಫಿ ಇರುತ್ತದೆ.