ಡೈಲಿ ವಾರ್ತೆ:02 ಜನವರಿ 2023

ಹಾರಾಟದ ವೇಳೆ 2 ಹೆಲಿಕಾಪ್ಟರ್‌ಗಳ ಮಧ್ಯೆ ಡಿಕ್ಕಿ : ನಾಲ್ವರು ಸಾವು, ಮೂವರ ಸ್ಥಿತಿ ಚಿಂತಾಜನಕ

ಸಿಡ್ನಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಪ್ರವಾಸೋದ್ಯಮ ತಾಣದಲ್ಲಿ ಇಂದು ಹಾರಾಟದ ವೇಳೆ ಎರಡು ಹೆಲಿಕಾಪ್ಟರ್‌ಗಳ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ, ಘಟನೆಯಲ್ಲಿ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಅದೃಷ್ಠವಶಾತ್‌ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ವಿಮಾನದ ರೋಟರ್‌ಗಳಲ್ಲಿ ಒಂದು ಮರಳು ದಂಡೆಯ ಮೇಲೆ ಬಿದ್ದಿರುವ ಚಿತ್ರಗಳನ್ನು ತೋರಿಸುತ್ತದೆ.