ಡೈಲಿ ವಾರ್ತೆ: 01/OCT/2024

ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ. (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು ) m:9632581508

ತಾಯಿಯೊಂದಿಗೆ ಚೇತಕ್ ಸ್ಕೂಟರ್ ನಲ್ಲಿ ನಾಲ್ಕು ದೇಶ ಸುತ್ತಿದ ಆಧುನಿಕ ಶ್ರವಣ ಕುಮಾರ್ ಮೈಸೂರಿನ ಡಿ. ಕೃಷ್ಣಕುಮಾರ್

  • ” ದೇಶ ಸುತ್ತಿ ತಾಯಿಯೊಂದಿಗೆ ಬದುಕು ಕಳೆಯುವ ಮೈಸೂರಿನ ಚೇತಕ್ ಯಾತ್ರಿಕ….!” ನಾಲ್ಕು ದೇಶಗಳ ಸುತ್ತಾಟ…., 68,264 ಕಿ.ಮೀ ಪ್ರಯಾಣ…!” ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಸೇರಿಸುವ ಇಂದಿನ ದಿನಮಾನಸದಲ್ಲಿ ಇವರು ಸಮಾಜಕ್ಕೆ ಮಾದರಿ….!” ಮಾತೃ ಸೇವೆಯ ಸಂಸ್ಕೃತಿಯನ್ನು ಬೆಳಗಿಸಿದ ಮಾತೃದೇವೋಭವ….!”

ಮಾತೃದೇವೋಭವ /ಪಿತೃದೇವೋಭವ ಎನ್ನುವುದು ಹಿಂದಿನ ದಿನ ಮಾನಸಕ್ಕೆ ಅಳಸಿ ಹೋಯಿತೇನೋ ಗೊತ್ತಿಲ್ಲ…., ಹಿರಿಯ ನಾಗರಿಕರನ್ನ ವೃದ್ಧಾಶ್ರಮಕ್ಕೆ ತಳ್ಳುವ ಇಂದಿನ ಜೀವನದ ವೈಭವೀಕರಣದ ಭರಾಟೆಯ ನಡುವೆ ಕೆಲವು ಮಕ್ಕಳಿಗೆ ಈ ವರದಿ ಪಾಠವಾದಿತೇನೋ….?”
” ತಂದೆ – ತಾಯಿಯನ್ನ ವೃದ್ದಾಶ್ರಮಕ್ಕೆ ಸೇರಿಸುವ ಇಂತಹ ಕಾಲಘಟ್ಟದಲ್ಲಿ, ಅಪರೂಪದ ವ್ಯಕ್ತಿಯೊಬ್ಬರು ಸಮಾಜದಲ್ಲಿ ತೀರ್ಥಯಾತ್ರೆ ಮಾಡುತ್ತಿದ್ದಾರೆ. ಹಿರಿಯ ನಾಗರಿಕರನ್ನ ಹಿಂದಿನ ಸಮಾಜ ಗೌರವದಿಂದ ನೋಡದಿದ್ದಾಗ, ತಂದೆ ತಾಯಿಯನ್ನು ಕಡೆಗಣಿಸುವಂತಹ ಮಕ್ಕಳಿಗೆ, ಯಾರು ಇಲ್ಲ ಎನ್ನುವ ಮಾತೃ ಭಾವನೆಯೊಂದಿಗೆ ಅನಾಥಾಶ್ರಮಕ್ಕೆ ಸೇರಿಸುವ ಕೆಲವು ಶ್ರೀಮಂತ ವರ್ಗದವರಿಗೆ, ಸಮಾಜಕ್ಕೆ ಸಂದೇಶವನ್ನು ನೀಡಲು ಹೊರಟಿದ್ದಾರೆ ಸಾಂಸ್ಕೃತಿಕ ನಗರಿ ಮೈಸೂರಿನ ಡಿ. ಕೃಷ್ಣಕುಮಾರ್ ಮತ್ತು ಮಾತಾಶ್ರೀ ಚೂಡಾ ರತ್ನಮ್ಮ ಇವರು”. ಕೃಷ್ಣಕುಮಾರ್ ಅವರ ಮಾತಿನಂತೆ, ತಾಯಿಯು ಹೊರ ಪ್ರಪಂಚದ ಜ್ಞಾನ ಇರಲಿಲ್ಲ, ಅಕ್ಕ ಪಕ್ಕದ ಸ್ಥಳವನ್ನೇ ಗಮನಿಸಿರಲಿಲ್ಲ, ಯಾವಾಗಲೂ ತನ್ನ ಮಗನಲ್ಲಿ ಈ ವೇದನೆಯನ್ನು ಹೇಳಿಕೊಳ್ಳುತ್ತಿದ್ದರು.ಇದನ್ನ ಮನಗಂಡ ಕೃಷ್ಣಕುಮಾರ್ ತಾಯಿಯನ್ನು ದೇಶವನ್ನು ಸುತ್ತುವ ಪರ್ಯಟನೆ ಕೈಗೊಂಡರು. ಅಂದಿನ ಈ ಹಠ ಸಾಧನೆಗೆ ಇಂದು ಸಾಧನೆಯಾಗಿ ಬೆಳೆಯಿತು. ಡಿ ಕೃಷ್ಣಕುಮಾರ್ ಮತ್ತು ತಾಯಿಯ ಪಯಣ ದಿನವೊಂದಕ್ಕೆ ಸಾವಿರ ಕಿಲೋಮೀಟರ್ ಪಯಣ, ಹಲವು ದೇಶ, ಗ್ರಾಮ, ಜಿಲ್ಲೆಗಳಷ್ಟು ಸುತ್ತಾಟ, ನಾಲ್ಕು ದೇಶದ ಪರಿಚಯ, ದೇಶ ಸುತ್ತಿ ತಾಯಿಯೊಂದಿಗೆ ಬದುಕು ಕಳೆಯುವ ಲಕ್ಷಾಂತರ ಜನರ ಸಂಪರ್ಕ, ಸಾವಿರಾರು ದೇಗುಲಗಳ ವಿಶೇಷ ದರ್ಶನ ಹಾಗೂ ಹಿರಿಯ ನಾಗರಿಕರ ಭೇಟಿ , ಅದೊಂದು ಆವರಣನೀಯ ಅನುಭವ. ಒಂದೇ ಮಾತಲ್ಲಿ ಹೇಳಬೇಕೆಂದರೆ ಕಲಿಯುಗದ ಶ್ರವಣಕುಮಾರ ಎಂದೇ ಖ್ಯಾತರಾದ ಮೈಸೂರುನ ಡಿ. ಕೃಷ್ಣಕುಮಾರ್ ಅವರ ಮಾತು. ತನ್ನ 70 ವರ್ಷದ ತಾಯಿಯನ್ನು ಚೇತಕ ಸ್ಕೂಟರ್ ನಲ್ಲಿ ಕೂರಿಸಿಕೊಂಡು ಎರಡೂವರೆ ವರ್ಷಗಳ ಕಾಲ ಭಾರತ, ನೇಪಾಳ, ಮಯನ್ಮಾರ್, ಭೂತಾನ್, ದೇಶಗಳಲ್ಲಿ ಸಂಚರಿಸಿ ಮರಳಿ ಮೈಸೂರಿಗೆ ಆಗಮಿಸಿದ್ದಾರೆ. ಮಾತೃ ಸೇವಾ ಸಂಕಲ್ಪ ಯಾತ್ರ ಹೆಸರಿನಲ್ಲಿ ಇವರು ನಡೆಸಿದ ದೇಶ ಪರಿಯಟನೆ ಕುರಿತು ಪತ್ರಿಕಾ ವರದಿಗಾರ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರ ಜೊತೆ ಪತ್ರಿಕಾ ಸಂವಾದದಲ್ಲಿ ಮನ ಬಿಚ್ಚಿ ಮಾತನಾಡಿದರು. ಎಂಟು ತಿಂಗಳ ಕಾಲ ದಕ್ಷಿಣ ಭಾರತದ ಪ್ರವಾಸ ಮುಗಿಸಿ, ಉತ್ತರ ಭಾರತದ ಕಡೆಗೆ ಪಯಣ ಬೆಳೆಸಿದಾಗ ನಕ್ಸಲ್ ಪೀಡಿತ ಭಯೋತ್ಪಾದನೆ ಸಂತ್ರಸ್ತ, ಪ್ರದೇಶಗಳನ್ನ ನೋಡಿದೆವು, ನೀಳವಾದ ಗಡ್ಡ ಬಿಟ್ಟಿದ ನನ್ನನ್ನು ಬಹುತೇಕರು ಯಾರು ಸಾಧು ಗುರೂಜಿ ಎಂದಿದ್ದಾರೆ,ತಾಯಿಯನ್ನು ಯಾತ್ರೆ ಮಾಡಿಸುತ್ತಿರುವುದಾಗಿ ವಿಚಾರ ತಿಳಿದು ವಿಶೇಷ ಗೌರವ ನೀಡಿದ್ದಲ್ಲದೆ,ನಮ್ಮ ಮನೆಯ ಸದಸ್ಯರೆಂದು ನೋಡಿಕೊಂಡಿದ್ದು ಸಂತಸ ತರಿಸಿತಂತೆ. ಇವರು ಯಾತ್ರೆಗೆ ಆಗಿರುವಂತ ಖರ್ಚು ಎಂಬ ಪ್ರಶ್ನೆ ಕೇಳಿದರೆ, ಯಾತ್ರಿಗಾಗಿ ಯಾರ ಬಳಿಯೂ ಕೈಚಾಚಿಲ್ಲ, ಬಹಳಷ್ಟು ಜನ ಹಣ, ದ್ರವ್ಯ ವಸ್ತುಗಳನ್ನು, ಆಹಾರವನ್ನು. ದಾನವಾಗಿ ನೀಡಲು ಬಂದರು. ಆದರೆ ಅದನ್ನು ಪಡೆಯಲಿಲ್ಲ, ಪುಣ್ಯವನ್ನು ನಷ್ಟ ಯಾಕೆ ಮಾಡಿಕೊಳ್ಳಬೇಕು ಎಂದು ನಕ್ಕುವುದು ಇವರ ವಾದ. ಕರೋನ ಸಂದರ್ಭದಲ್ಲಿ ಭಾರತಕ್ಕೆ ಹಿಂದಿರುವ ವೇಳೆ ಲಾಕ್ ಡೌನ್ ಘೋಷಣೆಯಾಗುವ ಸೂಚನೆ ಸಿಕ್ಕಿತು. ತಕ್ಷಣ ಪಶ್ಚಿಮ ಬಂಗಾಳದ ಕಾಲಿಂಗ್ ಪೋನ್ ನಿಂದ ಸ್ಯಾಮ್ ಸಂಗ್ ಟೀ ಗಾರ್ಡನ್ ಹಳ್ಳಿಗೆ ಬಂದೇವು ಗ್ರಾಮಸ್ಥರು ಒಂದುವರೆ ತಿಂಗಳು ಯಾವುದೇ ತೊಂದರೆ ಆಗದಂತೆ ವಾಸ್ತವಕ್ಕೆ ವ್ಯವಸ್ಥೆ ಮಾಡಿದರು.


ಬಿಹಾರದ ನಂತರ ನೇಪಾಳದ ರಾಜಧಾನಿ ಕಾಟ್ಮಂಡು, ಸೀತ ಜನ್ಮಸ್ಥಳ ಜನಕ್ಪುರ, ಮನೋಕಾಮನದೇವಿ,ಇನ್ನಿತರ ತೀರ್ಥ ಸ್ಥಾನಗಳನ್ನು ಪೂರೈಸಿ, ಪಶುಪತಿನಾಥ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನ ಪ್ರಾರ್ಥನೆಯನ್ನು ಸಲ್ಲಿಸಿ ಮುಂದೆ ಪಯಣವನ್ನು ಬೆಳೆಸುತ್ತಾರೆ.
ಲಾಕ್ ಡೌನ್ ನಲ್ಲಿ ಬಿಎಸ್ ವೈ ಕರೆ :
ಲಾಕ್ಡೌನ್ ವೇಳೆಯಲ್ಲಿ ಪಶ್ಚಿಮ ಬಂಗಾಳದಲ್ಲಿದ್ದಾಗ ಸಿಎಂ ಯಡಿಯೂರಪ್ಪ ಅವರು ಕೂಡ ಫೋನ್ ಕರೆ ಮಾಡಿ ಮಾಡಿದರು. ಸತತ ಏಳು ದಿನ ನಿರಂತರವಾಗಿ 2,673 ಕಿಲೋಮಿಟರ್ ಪ್ರಯಾಣ ಬೆಳೆಸಿ ತವರಿಗೆ ಮರಳಿದರು ಎಂದು ಪತ್ರಿಕಾ ಸಂವಾದದಲ್ಲಿ ತಿಳಿಸಿದರು.

ಹಳೆಯ ಚೇತಕ್ ದ್ವಿಚಕ್ರದಲ್ಲೇ ದೇಶದ ಪಯಣ : ಇವರು ಆಧುನಿಕ ಶ್ರವಣಕುಮಾರ ಎಂದು ಬಿರುದಾoಕಿತರಾದ ನಮ್ಮ ಮೈಸೂರಿನವರಾದ ಡಿ. ಕೃಷ್ಣಕುಮಾರ್ ಹಾಗೂ ತಾಯಿ ಚೂಡಾರತ್ನಮ್ಮಇವರು ” ಮಾತೃ ಸೇವಾ ಸಂಕಲ್ಪ ಯಾತ್ರೆ ‘ಎಂಬ
ಹೆಸರಿನಿಂದ ತಾಯಿಯನ್ನು ಕಳೆದ 5 ವರ್ಷಗಳಿಂದ ಸತತವಾಗಿ ಸುದೀರ್ಘ ಭಾರತ,ನೇಪಾಳ ,ಭೂತಾನ್ ಮತ್ತು ಮಯನ್ಮರ್ ದೇಶಗಳ
ಯಾತ್ರೆಯನ್ನು ವಿಶೇಷವಾಗಿ ತನ್ನ ತಂದೆ ಕೊಡಿಸಿದ ಹಳೆಯ ಬಜಾಜ್ ಚೇತಕ್ ಸ್ಕೂಟರ್ನಲ್ಲಿ ಯಾತ್ರೆ ಮಾಡಿಸುತ್ತಿರುವುದು ವಿಶೇಷ.ಜೀವಂತ ದಂತಕತೆಯಾಗಿರುವ
ಇವರ ಸಾಧನೆಯನ್ನು ಅನೇಕ ಸಂಘ ಸಂಸ್ಥೆಗಳು,ಗುರುತಿಸಿ ಪ್ರಶಸ್ತಿ, ಪುರಸ್ಕಾರ ನೀಡುತ್ತಲಿವೆ.ಭಾರತಾದ್ಯಾoತ
ಪರಿಚಯವಿರುವ ಪುರಸ್ಕಾರಗಳು ದೊರೆತಿವೆ.

ಸಮಾಜಕ್ಕೆ ನಿರಾಳ ಸಂದೇಶ :
ತಂದೆ ತಾಯಿಯನ್ನ ವೃತ್ತಾಶ್ರಮಕ್ಕೆ ಸೇರಿಸುವ ಇಂತಹ ಕಾಲಘಟ್ಟದಲ್ಲಿ ನನ್ನ ಪಯಣ ಇತರರಿಗೂ ಮಾದರಿಯಾಗಬೇಕೆನ್ನುವ ಉದ್ದೇಶದಿಂದ ಮುಂದುವರೆಸಿದ್ದೇನೆ. ಹಣ ಅಂತಸ್ತು, ಐಶ್ವರ್ಯ ನಡುವೆ ಮಾನವೀಯತೆ ಮರೆಯಾಗುತ್ತಿದೆ. ತನ್ನ ತಾಯಿಯ ಜೊತೆಗೆ ಇರುವಂತಹ ಬಾಂಧವ್ಯ ಹೀಗೆ ಮುಂದುವರೆಯುತ್ತದೆ. ಪ್ರಸ್ತುತ ನಾನು ಮೈಸೂರಿನಲ್ಲಿ ನೆಲೆಯಾಗಿ ತಾಯಿ ಜೊತೆಗೆ ಬದುಕನ್ನು ಕಟ್ಟಿಕೊಂಡಿದ್ದೇನೆ. ಇದುವರೆಗೆ ಮದುವೆ ಆಗಿಲ್ಲ. ಇನ್ನು ಹತ್ತು ಹಲವು ದೇಶವನ್ನು ಸುತ್ತುವ ಯೋಚನೆ ಹಾಗೂ ಯೋಜನೆಯನ್ನು ಹಾಕಿಕೊಂಡಿದ್ದೇನೆ ಇದಕ್ಕೆ ಸಮಾಜ ಒಪ್ಪುತ್ತಿದೆ ಅದೇ ಸಂತೋಷದ ವಿಚಾರ. ಹಿರಿಯರನ್ನ ಗೌರವಿಸುವಂತಹ ಆತ್ಮವಿಶ್ವಾಸ ನಮ್ಮಲ್ಲಿ ಬೆಳೆದರೆ ಮಾತ್ರ ಇಂತಹ ಸಂಚಾರವನ್ನು ಬೆಳೆಸಬಹುದು. ಈ ಸಂಚಾರ ಸಮಾಜ ಒಂದಿಷ್ಟು ಮಾದರಿ ಆದರೆ ನನ್ನ ಶ್ರಮ ಸಾರ್ಥಕ ಎನ್ನುತ್ತಾರೆ ಕೃಷ್ಣ ಕುಮಾರ್ ಅವರು. ಇವರ ಪಯಣದ ಹಾದಿ ಇನಷ್ಟು ಸುಗಮವಾಗಲಿ ಎನ್ನುವುದೇ ಪತ್ರಿಕೆಯ ಸದಾಶಯ.