




ಡೈಲಿವಾರ್ತೆ: 23/ಮೇ/2026


10 ದಿನದಲ್ಲಿ ಮೂರನೇ ಬಾರಿಗೆ ತೈಲ ದರ ಹೆಚ್ಚಳ:ವಾಹನ ಸವಾರರಿಗೆ ಮತ್ತೆ ಶಾಕ್ – ಪೆಟ್ರೋಲ್ 87, ಡೀಸೆಲ್ 91 ಪೈಸೆ ಏರಿಕೆ

ನವದೆಹಲಿ: ವಾಹನ ಸವಾರರಿಗೆ ಮತ್ತೆ ಶಾಕ್ ಎದುರಾಗಿದೆ. 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ.
ಶನಿವಾರ ಪೆಟ್ರೋಲ್ 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಹಾಗೂ ಡೀಸೆಲ್ ಬೆಲೆ 95.04 ರೂ. ಆಗಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆ ಮೇ 15 ರಿಂದ ಈಚೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರವನ್ನು ಹೆಚ್ಚಿಸಿವೆ. ಮೇ 15 ರಂದು ಬೆಲೆಗಳನ್ನು ಲೀಟರ್‌ಗೆ 3 ರೂ. ಹೆಚ್ಚಿಸಲಾಯಿತು. ನಂತರ ಮೇ 19 ರಂದು 90 ಪೈಸೆ ಹೆಚ್ಚಳವಾಯಿತು. ಒಟ್ಟಾರೆಯಾಗಿ, ದರಗಳು ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಹೆಚ್ಚಾಗಿದೆ.
ಎಲ್ಲೆಲ್ಲಿ ದರ ಎಷ್ಟು?
ಪೆಟ್ರೋಲ್‌ದೆಹಲಿ: 99.51 (+0.87)ಕೋಲ್ಕತ್ತಾ: 110.64 (+0.94)ಮುಂಬೈ: 108.49 (+0.90)ಚೆನ್ನೈ: 105.31 (+0.82)ಡೀಸೆಲ್ದೆಹಲಿ: 92.49 (+0.91)ಕೋಲ್ಕತ್ತಾ: 97.02 (+0.95)ಮುಂಬೈ: 95.02 (+0.94)ಚೆನ್ನೈ: 96.98 (+0.87)