ಡೈಲಿ ವಾರ್ತೆ : 03 ಮೇ 2022

ವರದಿ : ಕುಮಾರ್ ನಾಯ್ಕ್ ಭಟ್ಕಳ



ಕುಮಟ: ಅರಣ್ಯವಾಸಿಗಳನ್ನ ಉಳಿಸಿ ಮೇ ೭ ರಂದು ಹೋನ್ನಾವರದಲ್ಲಿ ಜರುಗಲಿರುವ ರ‍್ಯಾಲಿಗೆ ಕುಮಟ ತಾಲೂಕಿನಿಂದ ಮೂರು ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳು ಭಾಗವಹಿಸಲು ತೀರ್ಮಾನಿಸಲಾಯಿತು.
ಇಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಕುಮಟ ತಾಲೂಕಿನ ಮಹಾಸತಿ ದೇವಾಲಯದ ಸಭಾಂಗಣದಲ್ಲಿ ಜರುಗಿದ ಅರಣ್ಯ ಅತೀಕ್ರಮಣ ಸಭೆಯಲ್ಲಿ ತೀರ್ಮಾನಿಸಲಾಯಿತು.


ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟಿನಲ್ಲಿ ಸರಕಾರ ಮೇ ೩೦ ರ ಒಳಗೆ ಪ್ರಮಾಣ ಪತ್ರ ಸಲ್ಲಿಸುವದು ಹಾಗೂ ಉತ್ತರ ಕನ್ನಡ ಜಿಲ್ಲೆಗೂ ಶರಾವತಿ ಅಭಯಾರಣ್ಯ ಪ್ರದೇಶ ವಿಸ್ತರಿಸಿರುವುದರಿಂದ ಉಂಟಾದ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಮೇ ೭ ರಂದು ಹೋನ್ನಾವರದಲ್ಲಿ ‘ಅರಣ್ಯವಾಸಿಗಳನ್ನ ಉಳಿಸಿ’- ಬೃಹತ್ ಜಾಥ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.



ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಪಟಗಾರ ಹೆಗಡೆ, ಶಂಕರ ಗೌಡ ಕಂದಳ್ಳಿ, ಸುರೇಶ ಭಟ್ಟ ನಾಗೂರು, ಸಾರಾಬಿ ಬೆಟ್ಕುಳಿ, ಶಾಂತಿ ಮುಕ್ರಿ ಮಿರ್ಜಾನ, ಖೈರುನ್ನಿಸಾ ಕಿಮಾನಿ, ಮಹೇಂದ್ರ ನಾಯ್ಕ ಕತಗಾಲ, ಸೀತಾರಾಮ ನಾಯ್ಕ ಬೊಗ್ರಿಬೈಲ್, ಗಜಾನನ ಪಟಗಾರ ಹೆಗಡೆ, ಯಾಕೂಬಸಾಬ ಬೆಟ್ಕುಳಿ, ಶಾಂತಿ ಆಗೇರ್ ಮೊರಬಾ, ಜೋನ್ ಮಿರ್ಜಾನ, ಸುಮಿತ್ರಾ ಗೊಂಡ ಬರ್ಗಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಕರಣ ಹಿಂದಕ್ಕೆ ಒತ್ತಾಯ :
ಅರಣ್ಯ ಸಿಬ್ಬಂದಿಗಳು ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅರಣ್ಯವಾಸಿಗಳ ಮೇಲೆ ದಾಖಲಿಸಿದ ಕ್ರೀಮಿನಲ್ ಪ್ರಕರಣವನ್ನ ಹಿಂದಕ್ಕೆ ಪಡೆಯಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಸರಕಾರಕ್ಕೆ ಅಗ್ರಹಿಸಿದರು.