ಡೈಲಿವಾರ್ತೆ:31/ಆಗಸ್ಟ್ /2026

ರಾಜ್ಯ ಸ್ಕ್ವಾಯ್ ಚಾಂಪಿಯನ್ ಶಿಪ್ ನಲ್ಲಿ ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ವಿದ್ಯಾರ್ಥಿಗಳ ಸಾಧನೆ

ಬಂಟ್ವಾಳ : ಸ್ಕ್ವಾಯ್ ಅಶೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ ಕರ್ನಾಟಕ ರಾಜ್ಯ ಸ್ಕ್ವಾಯ್ ಚಾಂಪಿಯನ್ ಶಿಪ್ ಮತ್ತು ಸೆಲೆಕ್ಷನ್ ಟ್ರಯಲ್ ನಲ್ಲಿ ಗಾಣೆಮಾರ್ ಮಜ್ಲಿಸ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಆಯಿಷಾ ಇನಾಝ್ ಪ್ರಥಮ ಸ್ಥಾನ ಪಡೆದು (ಅಂಡರ್ 14 – open category) ಚಿನ್ನದ ಪದಕದ ಸಾಧನೆ ಮಾಡಿ ಒಡಿಶಾದಲ್ಲಿ ನಡೆಯಲಿರುವ ರಾಷ್ಟ್ರ ಸ್ಕ್ವಾಯ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಆಯಿಷಾ ರಿಮಾಸ್ ತೃತೀಯ ಸ್ಥಾನ ಪಡೆದು (under 14, -45 category) ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
ಇವರು ಸರ್ಫರಾಜ್ ಅಬ್ದುಲ್ ಖಾದಿರ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.