


ಡೈಲಿವಾರ್ತೆ:03/ಸೆ./2026

ರೋಟರಿ ಹಂಗಾರಕಟ್ಟೆ, ಸಾಸ್ತಾನ ವತಿಯಿಂದ ಎಡಬೆಟ್ಟು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸಾಸ್ತಾನ: ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದ ಎಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವತಿಯಿಂದ ಉಚಿತ ಸಮವಸ್ತ್ರವನ್ನು ಇತ್ತೀಚೆಗೆ ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷೆ ರೊ ಕುಸುಮಾ ಮನೋಜ್ ವಹಿಸಿದ್ದರು. ರೋಟರಿ ಸದಸ್ಯರುಗಳಾದ ಬಾಲಕೃಷ್ಣ ಪೂಜಾರಿ, ಮನೋಜ್ ಕುಮಾರ್, ಕಾರ್ತಿಕ್ ರಾಜ್, ಶ್ರೀಮತಿ ಲೀಲಾವತಿ ಗಂಗಾಧರ ಮತ್ತು ಶಿಕ್ಷಕ ವೃಂದ, ಹಾಗೂ ಪೋಷಕರು ಉಪಸ್ಥಿತರಿದ್ದರು.
ರೋಟರಿ ಕಾರ್ಯದರ್ಶಿ ರೊ ಕೆ ರಾಜಾರಾಮ ಐತಾಳ ನಿರೂಪಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಸ್ವಾಗತಿಸಿ ವಂದಿಸಿದರು.