ಡೈಲಿ ವಾರ್ತೆ : 05 ಮೇ 2022

ಆಗ್ರಾ : ಟ್ರಕ್‌ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕದ ಇಬ್ಬರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡ ದುರ್ಘಟನೆ ಲಖನೌ-ಆಗ್ರಾ ಹೆದ್ದಾರಿಯಲ್ಲಿ ನಡೆದಿದೆ.

ಬೆಳಗಾವಿಯ ವಿಠಲ್ ಮಾರುತಿ ಮತ್ತು ಅವರ ಪತ್ನಿ ಸುಲೋಚನಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಆಗ್ರಾಕ್ಕೆ ಪ್ರವಾಸಕ್ಕೆಂದು ವಿಠಲ್ ದಂಪತಿ ಹಾಗೂ ಉಳಿದ 11 ಜನರು ಬಸ್‌ನಲ್ಲಿ ತೆರಳಿದ್ದರು. ಅಲ್ಲಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದರು.

ಮಾರ್ಗಮಧ್ಯೆ ಟ್ರಕ್‌ವೊಂದು ಬಸ್‌ನ್ನು ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಗಾಯಗೊಂಡವರನ್ನು ಇಟಾವಾದ ಸೈಫೈ ವೈದ್ಯಕೀಯ ಕಾಲೇಜಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.