ಡೈಲಿ ವಾರ್ತೆ : 05 ಮೇ 2022

ಉತ್ತರ ಖಂಡ : ಹಿಂದೂ ಸಹೋದರಿಯರಿಬ್ಬರು ತಮ್ಮತಂದೆಯವರ ಕೊನೆಯ ಆಸೆಯಂತೆ ಮುಸ್ಲಿಮರ ಈದ್ಗಾ ಮೈದಾನಕ್ಕೆ 1.5 ಕೋಟಿ ರೂ. ಮೌಲ್ಯದ ಭೂಮಿ ದಾನ ನೀಡಿರುವ ಅಪರೂಪದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಇಲ್ಲಿನ ಉದಾಮ್ ಸಿಂಗ್‌ ನಗರ ಜಿಲ್ಲೆಯ ಕಾಶಿಪುರ ಗ್ರಾಮದ ಸರೋಜಾ ರಸ್ತೋಗಿ ಹಾಗೂ ಅನಿತಾ ರಸ್ತೋಗಿ ಭೂಮಿ ದಾನ ಮಾಡಿದ ಸಹೋದರಿಯರು. ಇವರ ತಂದೆ 2003 ರಲ್ಲಿ ಮೃತಪಟ್ಟಿದ್ದು, ಅದಕ್ಕೂ ಮುನ್ನ ಇದ್ದಾ ಮೈದಾನಕ್ಕೆ ಹೊಂದಿಕೊಂಡಿರುವ ತಮ್ಮಜಮೀನಿನ ಒಂದು ಭಾಗವನ್ನು ದಾನ ನೀಡಬೇಕೆಂದು ಬಯಸಿದ್ದರು. ತಂದೆ ಮೃತಪಟ್ಟ ಕಾರಣ ಅವರ ಆಸೆಯಂತೆ ಸಹೋದರಿಯರು 20,400 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ಇದ್ದಾ ಮೈದಾನಕ್ಕೆ ದಾನ ನೀಡಿದ್ದಾರೆ. ಈ ಮೂಲಕ ಭಾರತೀಯ ಅಸ್ಮಿತೆಯಾದ ಧರ್ಮ ಸೌಹಾರ್ದತೆ, ಸಹಬಾಳ್ವೆಯನ್ನು ಎತ್ತಿ ಹಿಡಿದಿದ್ದಾರೆ.