ಡೈಲಿ ವಾರ್ತೆ : 30 ಮೇ 2022

ಕೋಟ: ರಾಜ್ಯ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ
ಕಾರ್ಮಿರ ಆರೋಗ್ಯ ತಪಾಸಣಾ ಕಾರ್ಯಕ್ರಮ ಭಾನುವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೋಟ ಹಾಗೂ ಕೋಟತಟ್ಟು ಭಾಗದ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಕದ್ರಿಕಟ್ಟು ಮಾತನಾಡಿ ಸರಕಾರದ ಯೋಜನೆಗಳನ್ನು ಕರಾರುವಾಕ್ಕಾಗಿ ಜಾರಿಗೊಳಿಸುವ ಕರ್ತವ್ಯ ಸರಕಾರದ ಇಲಾಖೆಗಳದ್ದಾಗಿರುತ್ತದೆ. ಆದರೆ ಇಂದು ನಡೆಯುವ ಕಾರ್ಮಿಕರ ಆರೋಗ್ಯ ಕಾರ್ಯಕ್ರಮ ಈ ಭಾಗದ ಕಾರ್ಮಿಕ ಸಂಘಟನೆಗಳಿಗೆ ಸಮರ್ಪಕ ಮಾಹಿತಿ ದೊರೆತಿಲ್ಲ ಹೀಗಾದರೆ ಕಾರ್ಮಿಕರ ಆರೋಗ್ಯ ಯೋಜನೆ ಸಮರ್ಪಕ ಗೊಳಿಸಲು ಸಾಧ್ಯವೇ ಎಂದು ಇಲಾಖೆಯನ್ನು ಪ್ರಶ್ನಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಕಾರ್ಮಿಕರ ಸದಸ್ಯತ್ವ ಯೋಜನೆಯನ್ನು ಆನ್‍ಲೈನ್ ಮೂಲಕ ಮಾಡಿ ಸರಕಾರ ಫಲಾನುಭವಿಗಳಾಗುತ್ತಾರೆ, ಆದರೆ ಸ್ಥಳೀಯವಾಗಿ ಸಂಘಟನೆ ಕಟ್ಟಿಕೊಂಡು ಸರಕಾರದ ಯೋಜನೆಗಳನ್ನು ಸಮರ್ಪಕ ಗೊಳಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ ಹಾಗಾದರೆ ಸಹಾಯಧನಕ್ಕಾಗಿ ಮೊರೆ ಇಡುವ ಕಾರ್ಮಿಕರು ಸಕ್ರೀಯತೆ ಕ್ಷೀಣಿಸುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಲಾಖೆ ವಸ್ತು ನಿಷ್ಠ ಸಮರ್ಪಕ ಮಾಹಿತಿ ನೀಡಿ ಕಾರ್ಯಕ್ರಮ ಆಯೋಜನೆ ಮಾಡಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೋಟ ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪೂಜಾರಿ, ಸದಸ್ಯರಾದ ಪ್ರಶಾಂತ್ ಹೆಗ್ಡೆ, ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯೆ ಡಾ.ಪ್ರಕೃತಿ ಮತ್ತಿತರರು ಉಪಸ್ಥಿತರಿದ್ದರು.