ಡೈಲಿ ವಾರ್ತೆ : 01 ಆಗಸ್ಟ್ 2022

ಕೋಟ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಮತ್ತು ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಸರ್ಕಾರಿ ಪ್ರೌಢಶಾಲೆ ‘ನವಕಿರಣ’ ಕನ್ನಡ ಸಾಹಿತ್ಯ ಸಂಘ ಕೋಡಿಕನ್ಯಾಣ ಇವರ ಸಂಯುಕ್ತ ಆಶ್ರಯದಲ್ಲಿ ತಿಂಗಳ ಸರಣಿ ‘ಕಥಾ – ಕವನ ಕಮ್ಮಟ ‘ ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಎಸ್ ಡಿ.ಎಂ.ಸಿ.ಅಧ್ಯಕ್ಷರಾದ ನಿವಾಸ್ ಬಂಗೇರವರು ವಿದ್ಯಾರ್ಥಿಗಳು ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ವಿದ್ಯಾರ್ಥಿಗಳಿಗೆ ಕವಿತೆಗಳನ್ನು ಬರೆಯುವುದನ್ನು ತಿಳಿಸಿಕೊಟ್ಟರಲ್ಲದೆ ಮಕ್ಕಳಿಂದ ಅಭಿನಯ ಗೀತೆಯನ್ನು ಮಾಡಿಸಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿದ್ದ ಸವಿತಾ ಶಾಸ್ತ್ರಿ ಕಥೆಗಳನ್ನು ಬರೆಯುವ ಕುರಿತು ಮಾರ್ಗದರ್ಶನ ಮಾಡಿದರು.

ಬ್ರಹ್ಮಾವರ ಕ. ಸಾ. ಪ .ಅಧ್ಯಕ್ಷರಾದ ಜಿ. ರಾಮಚಂದ್ರ ಐತಾಳ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೋಮಬಂಗೇರ ಸ್ಮಾರಕ ಸರಕಾರಿ ಪ್ರೌಢಶಾಲೆ ಕೋಡಿಕನ್ಯಾನ ಇಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪೌಷ್ಟಿಕತೆಯನ್ನು ಹೆಚ್ಚಿಸಲು ಅಕ್ಷರದಾಸೋಹದಲ್ಲಿ ಸರಕಾರದಿಂದ ನೀಡಲಾದ ಮೊಟ್ಟೆ ಹಾಗೂ ಚಿಕ್ಕಿಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಶ್ರೀನಿವಾಸ್ ಬಂಗೇರ ಹಾಗೂ ಹಿರಿಯ ಶಿಕ್ಷಕಿ ರಾಧಿಕಾ ವಿತರಿಸಿದರು.

ಕಾರ್ಯಕ್ರಮವನ್ನು 10ನೇ ತರಗತಿಯ ವಿದ್ಯಾರ್ಥಿನಿ ರಚನಾ ನಿರೂಪಿಸಿದರು.
ಹಿರಿಯ ಸಹ ಶಿಕ್ಷಕಿ ರಾಧಿಕಾ ಆಶಯ ನುಡಿಗಳನ್ನಾಡಿದರು. ಶಿಕ್ಷಕಿ ಜ್ಯೋತಿ ಕೃಷ್ಣಾ ಪೂಜಾರಿ ಸ್ವಾಗತಿಸಿದರು.
ಅನಿತಾ ವಂದಿಸಿದರು.